More

    ಅರಣ್ಯ ರಕ್ಷಕರೇ ಸಂಕಷ್ಟದಲ್ಲಿರೋವಾಗ ಅರಣ್ಯ ರಕ್ಷಣೆ ಮಾಡಿ ಅನ್ನೋದಾದರೂ ಹೇಗೆ?!

    ಬೆಂಗಳೂರು: ಕರೊನಾ ಸೋಂಕಿನ ಕಾವು ಇದೀಗ ಅರಣ್ಯ ರಕ್ಷಕರಿಗೂ ಹಾಗೂ ಕಳ್ಳಬೇಟೆ ಶಿಬಿರಗಳಲ್ಲಿ ಕೆಲಸ ಮಾಡುವ ಅರಣ್ಯ ವೀಕ್ಷಕರಿಗೂ ತಟ್ಟಿದೆ.
    ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಹಣ ಬಿಡುಗಡೆ ವಿಳಂಬವಾಗಿದೆ. ಶಿಬಿರಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದಿಂದ ವಜಾಗೊಳಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್​ಟಿಸಿಎ) ಸೂಚನೆ ನೀಡಿದೆ. ಇದರಿಂದ ಅರಣ್ಯ ರಕ್ಷಕರಿಗೆ ಸಂಕಷ್ಟ ಎದುರಾಗಿದೆ. ಎನ್​ಟಿಸಿಎ ನಿರ್ಧಾರ ರಾಜ್ಯದ ವನ್ಯಜೀವಿಗಳ ರಕ್ಷಣೆ , ಹುಲಿ ನಿಕ್ಷೇಪ ಹಾಗೂ ಕಳ್ಳ ಬೇಟೆ ತಡೆಗಟ್ಟುವುದರ ಮೇಲೆ ಪರಿಣಾಮ ಬೀರಲಿದೆ.

    ಕರೊನಾ ಪ್ರಾರಂಭವಾದ ದಿನದಿಂದ ನಾಗರಹೊಳೆ ಮತ್ತು ಬಂಡೀಪುರಕ್ಕೆ ಸಾಕಷ್ಟು ಹಣ ಹಂಚಿಕೆ ಮಾಡಲಾಗಿದೆ. ಆದರೆ, ಆಗಸ್ಟ್ ವೇಳೆಗೆ ಕಡಿತ ಉಂಟಾಗಿದೆ. ಬಿಆರ್​ಟಿ , ಕಾಳಿ ಮತ್ತು ಭದ್ರಾ ಮೀಸಲು ಪ್ರದೇಶಕ್ಕೆ ಧನಸಹಾಯ ಕಡಿಮೆಯಾಗಿದೆ. ಪ್ರಾದೇಶಿಕ ಹಾಗೂ ಎನ್​ಟಿಸಿಎ ಕಚೇರಿಗೆ ಅನುದಾನ ಬಿಡುಗಡೆ ಮಾಡಯವಂತೆ ಮನವಿ ಸಲ್ಲಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಅರಣ್ಯ ಪ್ರಧಾನ ಮುಖ್ಯ ಸಂರಕ್ಷಾಣಾಧಿಕಾರಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು

    ಹಣ ಮಂಜೂರು: ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿ ಒಟ್ಟು 104 ಕಾವಲುಗಾರರಿದ್ದಾರೆ. ಅವುಗಳಲ್ಲಿ 48 ರಕ್ಷಕರಿಗೆ ಮಾತ್ರ ಹಣ ಮಂಜೂರಾಗಿದೆ. ಪ್ರತಿ ಶಿಬಿರಕ್ಕೆ 4 ರಕ್ಷಕರಿರುತ್ತಾರೆ. ಆದರೆ, ಈಗ ಮಂಜೂರಾದ ಹಣ ಒಂದು ಶಿಬಿರಕ್ಕೆ ಒಬ್ಬರಿಗೆ ಮಾತ್ರ ಮೀಸಲು ಎನ್ನುವಂತಿದೆ.

    ಕೇಂದ್ರ ಸರ್ಕಾರ ಹಣ ಬಿಡುಗಡೆಗೆ ವಿಳಂಬ ಮಾಡುತ್ತಿದೆ. ಕಳ್ಳಬೇಟೆ ತಡೆ ಗಟ್ಟಲು ಅರಣ್ಯ ವೀಕ್ಷಕರ ಹಾಗೂ ಅರಣ್ಯ ರಕ್ಷಕರ ಪಾತ್ರ ನಿರ್ಣಾಯಕ. ಯಾವುದೇ ಕಾರಣಕ್ಕೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅರಣ್ಯ ವೇತನದ ಸೇವೆಗಳನ್ನು ಕಡಿತಗೊಳಿಸಬಾರದು ಎಂದು ಮನವಿ ಸಲ್ಲಿಸಲಾಗಿದೆ.
    | ಸಂಜಯ್ ಮೋಹನ್ ಪಿಸಿಸಿಎಫ್ ,ಅರಣ್ಯ ಮುಖ್ಯಸ್ಥ

    ಅಂಚೆ ಕಚೇರಿಗೆ ಚಿಕ್ಕ-ಚೊಕ್ಕ ಕಟ್ಟಡ

    https://www.vijayavani.net/ex-cm-siddaramaiah-got-affected-by-covid-19/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts