More

    ಮಧ್ಯಾಹ್ನವೇ ರಸ್ತೆಗಳು ಖಾಲಿ ಖಾಲಿ

    ಸಿಂಧನೂರು: ತಾಲೂಕಿನಲ್ಲಿ ಬಿರು ಬಿಸಿಲಿನದ್ದೇ ಕಾರುಬಾರು ಎನ್ನುವಂತಾಗಿದೆ. ತಾಪಮಾನ ದಿನೇ ದಿನೆ ಏರಿಕೆಯಾಗುತ್ತಿದ್ದು, ಸೂರ್ಯ ನೆತ್ತಿ ಸುಡುತ್ತಿದ್ದರೆ, ಭೂಮಿ ಅಂಗಾಲು ಸುಡುತ್ತಿದೆ. ಇದರಿಂದ ಜನತೆ ತತ್ತರಿಸಿದ್ದಾರೆ.

    ಕಳೆದ ಒಂದು ವಾರದಿಂದ ಬಿಸಿಲಿನ ಝಳ ಹೆಚ್ಚುತ್ತಿದ್ದು, ಬೆಳಗ್ಗೆ 8 ಗಂಟೆಯಿಂದಲೇ ಸೂರ್ಯನ ಪ್ರತಾಪ ಕಂಡುಬರುತ್ತಿದೆ. ವೃದ್ಧರು, ಮಕ್ಕಳನ್ನು ರೋಗಗಳು ಕಾಡುತ್ತಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

    ನಗರದಲ್ಲಿ ಜನರು ಮಧ್ಯಾಹ್ನವೇ ಮನೆ ಸೇರುತ್ತಿದ್ದಾರೆ. ಮಧ್ಯಾಹ್ನದ ನಂತರ ಗಂಗಾವತಿ, ಕುಷ್ಟಗಿ ಹಾಗೂ ರಾಯಚೂರು ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ಬಿಸಿಲಿನಿಂದ ಕಂಗೆಟ್ಟು ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ತಂಪು ಪಾನೀಯ ಅಂಗಡಿಗಳ ಮುಂದೆ ಜನರು ಕಾಣ ಸಿಗುವಂತಾಗಿದೆ.

    ಈ ವಾರದ ಅಂತ್ಯದಲ್ಲಿ ಬಿಸಿಲು ಮತ್ತಷ್ಟು ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ. ಸದ್ಯ 40ರಿಂದ 42 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಬಿಸಿಲಿನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಲಿನಲ್ಲಿ ವ್ಯಾಪಾರ ಆಗುವುದಿಲ್ಲ. ಸುಮ್ಮನೆ ಕುಳಿತರೆ ಆರೋಗ್ಯ ಹಾಳು ಎಂದು ಮಧ್ಯಾಹ್ನವೇ ಮನೆ ಸೇರುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts