More

    ನೂರು ಕೋಟಿ ರೂ. ಕ್ಲಬ್ ಸೇರಿದ ಕರ್ನಾಟಕ ಚುನಾವಣಾ ಅಕ್ರಮ!

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ರಾಜ್ಯದಲ್ಲಿ ಕುರುಡು ಕಾಂಚಾಣ ಭರಾಟೆ ಜೋರಾಗಿದೆ. ಪೊಲೀಸ್​ ಸಿಬ್ಬಂದಿ ಮತ್ತು ಚುನಾವಣಾಧಿಕಾರಿಗಳ ತಪಾಸಣೆ ವೇಳೆ ಬೆಲೆ ಬಾಳುವ ವಸ್ತುಗಳು ಮತ್ತು ಲಕ್ಷ ಲಕ್ಷ ಹಣ ಸಿಗುತ್ತಿದೆ. ಇದೀಗ ಕರ್ನಾಟಕದ ಚುನಾವಣಾ ಅಕ್ರಮ ನೂರು ಕೋಟಿ ರೂ. ಕ್ಲಬ್​ ಸೇರಿದೆ.

    ಚುನಾವಣಾ ನೀತಿ ಸಂಹಿತೆ ಜಾರಿ ನಂತರ ಅಧಿಕಾರಿಗಳು ವಶಕ್ಕೆ ಪಡೆದ ನಗದು ಮತ್ತು ವಸ್ತುಗಳು ಮೌಲ್ಯ ನೂರು ಕೋಟಿ ರೂ. ದಾಟಿದೆ. ಚುನಾವಣಾ ಅಧಿಸೂಚನೆ ಜಾರಿಯಾಗುವ ಮುನ್ನವೆ ರಾಜ್ಯದಲ್ಲಿ ಭರ್ಜರಿ ಬೇಟೆ ನಡೆಯುತ್ತಿದೆ. ಅಧಿಸೂಚನೆ ಪ್ರಕಟವಾದ ಬಳಿಕ ಇನ್ನಷ್ಟು ಅಕ್ರಮ ಹೆಚ್ಚಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಅಮೂಲ್ ಉತ್ಪನ್ನಗಳಿಂದ ರಾಜ್ಯದ ರೈತರಿಗೆ ತೊಂದರೆ: ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆತಂಕ

    20ಕ್ಕೂ ಹೆಚ್ಚು ಎಫ್​ಐಆರ್​
    ನಗರದಲ್ಲಿ ಎಫ್​ಐಆರ್​ ಮೇಲೆ ಎಫ್​ಐಆರ್​ಗಳು ದಾಖಲಾಗುತ್ತಿವೆ. ಈವರೆಗೂ ಸುಮಾರು 20ಕ್ಕೂ ಹೆಚ್ಚು ಎಫ್​ಐಆರ್​ಗಳು ದಾಖಲಾಗಿವೆ. ವಶಕ್ಕೆ ಪಡೆದಿರುವ ಸುಮಾರು ನೂರು ಕೋಟಿ ಮೌಲ್ಯದ ನಗದು ಮತ್ತು ವಸ್ತುಗಳಲ್ಲಿ ಅತೀ ಹೆಚ್ಚು ಸದ್ದು ಕುಕ್ಕರ್​ಗಳದ್ದೇ ಆಗಿದೆ.

    ನಗರದ ಗಡಿ ಭಾಗಗಳಲ್ಲಿ ಹೆಚ್ಚು
    ವಶಕ್ಕೆ ಪಡೆದ ವಸ್ತುಗಳು ಯಾವುವು ಅಂದರೆ, ಗ್ಯಾಸ್ ಸ್ಟೌವ್, ಸೀರೆ, ತವಾ, ಮಿಕ್ಸಿ, ಕುಕ್ಕರ್ ಹಾಗೂ ಗಡಿಯಾರಗಳು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾರರಿಗೆ ಆಮಿಷ ಒಡ್ಡಲು ದುಬಾರಿ ವಸ್ತುಗಳು ಅಕ್ರಮವಾಗಿ ನಗರಕ್ಕೆ ಎಂಟ್ರಿ ಕೊಡುತ್ತಿವೆ. ಸರ್ಕಾರಿ ಬಸ್​​ಗಳನ್ನೂ ಬಿಡದೆ ಪರಿಶೀಲನೆ ಮಾಡಲಾಗುತ್ತಿದೆ. 100 ಕೋಟಿ ವಸ್ತುಗಳಲ್ಲಿ ಅತಿ ಹೆಚ್ಚು ವಸ್ತುಗಳು ಪತ್ತೆಯಾಗಿದ್ದು ನಗರದ ಗಡಿ ಭಾಗಗಳಲ್ಲಿ.

    ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
    ಹೊಸೂರು, ದೇವನಹಳ್ಳಿ ಚೆಕ್ ಪೋಸ್ಟ್, ಹೊಸಕೋಟೆ ಭಾಗಗಳಲ್ಲಿ ಹೆಚ್ಚು ವಸ್ತುಗಳು ಪತ್ತೆಯಾಗಿವೆ. ಒಟ್ಟಾರೆ ವಶಕ್ಕೆ ಪಡೆದ ವಸ್ತು ಹಾಗೂ ನಗದು ಹಣದ ಮೌಲ್ಯ 100 ಕೋಟಿ ರೂ. ಕ್ಲಬ್ ಸೇರಿದೆ. ಸದ್ಯಕ್ಕೆ ನಗರದಲ್ಲಿ ಪರಿಶೀಲನೆ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಮತ್ತಷ್ಟು ವಸ್ತು ಹಾಗೂ ನಗದು ಪತ್ತೆಯಾಗುವ ಸಾಧ್ಯತೆ ಹೆಚ್ಚಿದೆ.

    ಇದನ್ನೂ ಓದಿ: ಟ್ರಾಫಿಕ್​ ಬಗ್ಗೆ ಪಾಠ ಮಾಡುವ ಪೊಲೀಸ್​ ಇಲಾಖೆಗೆ ಮರುಪಾಠ ಮಾಡಿದ ನೆಟ್ಟಿಗರು!

    ಮಾರ್ಚ್ 29 ರಿಂದ ಏಪ್ರಿಲ್ 6 ವರೆಗೆ ಚುನಾವಣಾಧಿಕಾರಿಗಳು ನಡೆಸಿರುವ ಕಾರ್ಯಚರಣೆಯಲ್ಲಿ 27 ಕೋಟಿ 38 ಲಕ್ಷ ರೂ. ವೆಚ್ಚದ ನಗದು ವಶಕ್ಕೆ ಪಡೆಯಲಾಗಿದೆ ಮತ್ತು 26.38 ಕೋಟಿ ರೂ. ಮೌಲ್ಯದ 4 ಲಕ್ಷದ 25 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

    87 ಲಕ್ಷ 89 ಸಾವಿರ ಮೌಲ್ಯದ 131 ಕೆ.ಜಿ ಮಾದಕ ವಸ್ತು, 9 ಕೋಟಿ 87 ಲಕ್ಷ ರೂ. ಮೌಲ್ಯದ 25 ಕೆ.ಜಿ ಚಿನ್ನ, 92 ಲಕ್ಷ ರೂ. ಮೌಲ್ಯದ 135 ಕೆ.ಜಿ ಬೆಳ್ಳಿ ಹಾಗೂ ಕುಕ್ಕರ್, ಸೀರೆ ಸೇರಿದಂತೆ 12 ಕೋಟಿ 85 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್​ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

    ಒಂದು ಕಡೆ ಸಫಾರಿ ಇನ್ನೊಂದು ಕಡೆ ಸುಪಾರಿ! ಇದು ಬಿಜೆಪಿಯ (ಭರ)ವರಸೆ ಎಂದು ಎಚ್​ಡಿಕೆ ಆಕ್ರೋಶ

    ಬೆಂಗಳೂರಲ್ಲಿ ಅಮಾನವೀಯ ಘಟನೆ: ಕಳ್ಳತನ ಮಾಡಿದನೆಂದು 1 ವಾರ ಕೂಡಿಟ್ಟು ಹಲ್ಲೆ, ನರಳಿ ನರಳಿ ವ್ಯಕ್ತಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts