More

    ಅಂಗನವಾಡಿ ಕಾರ್ಯಕರ್ತೆಯರ ಉದ್ಯೋಗಕ್ಕೆ ಕುತ್ತು

    ಯಳಂದೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಂವಿಧಾನ ವಿರೋಧಿಯಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ದಸಂಸ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 2020 ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಸತ್‌ನಲ್ಲಿ ಚರ್ಚಿಸದೆ ಜಾರಿಗೆ ತಂದಿದೆ. 1976ರಲ್ಲಿ ಐಸಿಡಿಎಸ್ ಅಡಿ ಜಾರಿಗೆ ತಂದಿರುವ ಬಾಲ್ಯ ಪೂರ್ವ ಮಕ್ಕಳ ಆರೈಕೆ ಜಾಗತಿಕ ಮಾದರಿ ಯೋಜನೆಯನ್ನು ಈ ನೂತನ ಶಿಕ್ಷಣ ನೀತಿಯಲ್ಲಿ ಕಡೆಗಣಿಸಲಾಗಿದೆ. ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯದ 45 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉದ್ಯೋಗ ಕಳೆದುಕೊಳ್ಳುವ ಭೀತಿ ಇದೆ. ಹೊಸ ಶಿಕ್ಷಣ ನೀತಿ ಪ್ರತಿ ಹಂತದಲ್ಲೂ ಮೆರಿಟ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನೇ ಶಿಫಾರಸು ಮಾಡುವುದರಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ದೂರಿದರು.

    ದಸಂಸ ಜಿಲ್ಲಾ ಸಮಿತಿ ಮಹಿಳಾ ಒಕ್ಕೂಟದ ಭಾಗ್ಯಲಕ್ಷ್ಮೀ, ತಾಲೂಕು ಸಂಚಾಲಕರಾದ ಶಂಕರಮೂರ್ತಿ, ರಾಜಮ್ಮ, ಸದಸ್ಯ ಎನ್.ಮಲ್ಲರಾಜು, ಅಂಬಳೆ ಮಹದೇವಮ್ಮ, ಕಿನಕಹಳ್ಳಿ ಶಾಂತಮ್ಮ, ಕೆಂಪಮ್ಮ, ವೈ.ಕೆ.ಮೋಳೆ ನೀಲಯ್ಯ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts