More

    ರಾಜ್ಯದಲ್ಲಿ ಇಳಿಕೆಯಾದ ಸೋಂಕು: ಇಂದು 1,708 ಜನರಲ್ಲಿ ಕರೊನಾ ಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಇಂದು ರಾಜ್ಯಾದ್ಯಂತ ಒಟ್ಟು 1,708 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,83,947ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 36 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಮೃತರ ಸಂಖ್ಯೆ 36,157ಕ್ಕೆ ಹೆಚ್ಚಿದೆ.

    ಇಂದು 2,463 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಗುಣಮುಖರ ಸಂಖ್ಯೆ 28,18,476ಕ್ಕೆ ಏರಿದೆ. ಸದ್ಯ 29,291 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇಕಡಾ 1.09ರಷ್ಟಿದ್ದರೆ ಮರಣ ಪ್ರಮಾಣ ಶೇಕಡಾ 2.10ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು 386 ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,22,189ಕ್ಕೆ ಹೆಚ್ಚಿದೆ. ಕಳೆದ 24 ಗಂಟೆಗಳಲ್ಲಿ 9 ಸೋಂಕಿತರು ಕೊನೆಯುಸಿರೆಳೆದಿದ್ದು, ನಗರದಲ್ಲಿ ಒಟ್ಟಾರೆ ಮೃತರ ಸಂಖ್ಯೆ 15,796ರಷ್ಟಾಗಿದೆ. 793 ಸೋಂಕಿತರು ಗುಣಮುಖವಾಗಿದ್ದು, ಗುಣಮುಖರ ಸಂಖ್ಯೆ 11,94,641ಕ್ಕೆ ಹೆಚ್ಚಿದೆ. ಸದ್ಯ ನಗರದ ವಿವಿಧ ಆಸ್ಪತ್ರೆಗಳಲ್ಲಿ 11,751 ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಲಾಗಿದೆ.

    ದಕ್ಷಿಣ ಕನ್ನಡದಲ್ಲಿ 241, ಮೈಸೂರು 210, ಹಾಸನ 121, ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ತಲಾ 105 ಪ್ರಕರಣಗಳು ಕಾಣಿಸಿಕೊಂಡಿವೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಮನಗರ ಮತ್ತು ವಿಜಯಪುರದಲ್ಲಿ ಏಕದಿನ ಏರಿಕೆ ಸಂಖ್ಯೆ ಒಂದಂಕಿಗೆ ಇಳಿದಿದೆ. ಯಾದಗಿರಿ ಜಿಲ್ಲೆಯಲ್ಲಿ ಇಂದು ಒಬ್ಬರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. (ಏಜೆನ್ಸೀಸ್)

    ‘ನಾನು ಸಿಸಿಬಿ ಇನ್‌ಸ್ಪೆಕ್ಟರ್, 15 ಲಕ್ಷ ರೂ. ಕೊಟ್ಟರೆ ಕ್ಲೇಸ್ ಕ್ಲೋಸ್ ಮಾಡ್ತೇನೆ’ ಎಂದು ವಂಚಿಸಿದ್ದ ವ್ಯಕ್ತಿಯ ಬಂಧನ

    ‘ಐ ವಿಲ್ ಕಿಲ್ ಯು’ ಎಂದು ಬೆದರಿಸಿ ಪೊಲೀಸರ ಕೊಲೆಗೆ ಯತ್ನಿಸಿದ್ದ ಘಾನಾ ಪ್ರಜೆ ಉತ್ತರ ಪ್ರದೇಶದಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts