More

    ಕಲಬುರಗಿಯಲ್ಲಿ 5 ಹೊಸ ಪ್ರಕರಣ- ಉಳಿದೆಡೆ ಇಳಿಮುಖವಾಗಿದೆ ವೈರಸ್‌ ಪ್ರಭಾವ: 395ಕ್ಕೇರಿದ ಸೋಂಕಿತರ ಸಂಖ್ಯೆ – 111 ಬಿಡುಗಡೆ

    ಬೆಂಗಳೂರು: ಕಳೆದ 3-4 ದಿನಗಳಿಗೆ ಹೋಲಿಸಿದರೆ, ಹೊಸ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದ್ದು ನಿನ್ನೆ ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ಕೇವಲ ಐವರಲ್ಲಿ ಸೋಂಕು ಪತ್ತೆಯಾಗಿದೆ. ಅವುಗಳೆಲ್ಲವೂ ಕಲಬುರಗಿಯ ಪ್ರಕರಣಗಳೇ ಆಗಿದ್ದು, ಉಳಿದೆಡೆ ಯಾವುದೇ ಹೊಸ ಸೋಂಕು ಪ್ರಕರಣ ವರದಿಯಾಗಿಲ್ಲ.

    ಅರ್ಧ ದಿನದಲ್ಲಿಯೇ 30-40ರ ಗಡಿ ದಾಟುತ್ತಿದ್ದ ಸೋಂಕಿನ ಪ್ರಮಾಣಕ್ಕೆ ಹೋಲಿಸುವುದಾದರೆ ರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿದೆ. ಜನರು ಮನೆಯಲ್ಲಿಯೇ ಉಳಿಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದು ಸೇರಿದಂತೆ ಸರ್ಕಾರ ನೀಡಿರುವ ನಿದರ್ಶನಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಮಾತ್ರ ಸೋಂಕಿನ ಪ್ರಮಾಣ ಕಡಿಮೆಯಾಗುತ್ತದೆ.

    ಮೊದಲ ದಿನದಿಂದ ಇಲ್ಲಿವರೆಗಿನ ಅಂಕಿಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ರಾಜ್ಯದಲ್ಲಿ ಒಟ್ಟೂ 395 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆ ಪೈಕಿ 111 ಮಂದಿ ಬಿಡುಗಡೆಯಾಗಿದ್ದಾರೆ. 16 ಮಂದಿ ಮೃತಪಟ್ಟಿದ್ದಾರೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

    ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts