More

    ಉಳ್ಳಾಲದ ವೀರರಾಣಿ ಅಬ್ಬಕ್ಕ ವೃತ್ತದ ಬಳಿ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ

    ಉಳ್ಳಾಲ: ಇಪ್ಪತ್ತಮೂರು ವರ್ಷ ಹಿಂದೆ ಭಾರತೀಯ ಸೇನೆ ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟ್ಟಿಸಿ ಕಾರ್ಗಿಲ್‌ನಲ್ಲಿ ವಿಜಯ ಪತಾಕೆ ಹಾರಿಸಿದ ಈ ದಿನ ಭಾರತೀಯರಿಗೆ ಹೆಮ್ಮೆಯ ದಿನ ಎಂದು ಮಾಜಿ ಸೈನಿಕ ಕೆ.ಸಿ. ನಾರಾಯಣ ಹೇಳಿದರು.

    ಭಗತ್‌ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ವೃತ್ತದ ಬಳಿ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
    16 ಡಿಗ್ರಿ ತಾಪಮಾನ ಆಗುವಾಗ ನಾವು ಕಂಪಿಸುತ್ತೇವೆ. ಆದರೆ ಕಾರ್ಗಿಲ್ ಬೆಟ್ಟದಲ್ಲಿ ತಾಪಮಾನ ಮೈನಸ್ 45 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಈ ಕಠಿಣ ಪರಿಸ್ಥಿತಿಯಲ್ಲೂ ಭಾರತೀಯ ಸೇನೆ ಯುದ್ಧ ಮಾಡಿ ಜಯ ಸಾಧಿಸಿದ್ದು ಅದ್ಭುತ ಎಂದು ತಿಳಿಸಿದರು.

    ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಪೊಲೀಸ್ ಠಾಣೆಯ ಸಹಾಯಕ ಉಪನೀರೀಕ್ಷಕ ವೆಂಕಟೇಶ್, ಭಾರತ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ರಾವ್, ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ, ಜಾಗೃತಿ ಸೊಸೈಟಿ ನಿರ್ದೇಶಕ ಉದಯ ಆರ್.ಕೆ., ಪ್ರತಿಷ್ಠಾನದ ಗೌರವಾಧ್ಯಕ್ಷ ರಾಕೇಶ್ ಬೈಪಾಸ್, ಉಪಾಧ್ಯಕ್ಷ ಗೋಪಿನಾಥ್ ಬಗಂಬಿಲ, ಕೋಶಾಧಿಕಾರಿ ಹರೀಶ್ ಅಂಬ್ಲಮೊಗರು, ವೃಕ್ಷಾಂಕುರ ರಕ್ಷಾ ಸಂಚಾಲಕ ಪ್ರಸಾದ್ ಕೊಂಡಾಣ, ಕಾರ್ಯದರ್ಶಿಗಳಾದ ಮೋಹನ್ ಸಾಲ್ಯಾನ್, ದಾಮೋದರ ನಡಾರ್, ಗುರುವಂದನೆ ಸಂಚಾಲಕ ರಾಜೇಂದ್ರ ಸೇವಂತಿಗುಡ್ಡೆ, ಪ್ರಮುಖರಾದ ನವೀನ್ ಎ.ಕೆ., ಶಿವಾಜಿ ಕುತ್ತಾರು, ಗಂಗಾಧರ ಅಂಬ್ಲಮೊಗರು, ರಾಜೇಶ್ ಗಣೇಶ್ ನಗರ, ಶರತ್ ಭಂಡಾರಿ ಪನೀರ್, ರವೀಂದ್ರ ಶೆಟ್ಟಿ, ಚಂದ್ರಶೇಖರ್ ಕೊಲ್ಯ, ನಾಗೇಶ್ ಬೆಳ್ಮ, ದೀಕ್ಷಿತ್ ಕುಂಪಲ, ಪೊಟೋಗ್ರಾಫರ್ ಅಸೋಸಿಯೇಷನ್ ಸದಸ್ಯ ಸಂತೋಷ್ ಮಾರ್ಲ, ಉದಯ ಬಸ್ತಿಪಡ್ಪು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts