More

    ಅಮ್ಮ ಮಾಡಿದ ಕೆಲಸದಿಂದ ಸಮಸ್ಯೆ ಆಗಿದ್ದು ಕರೀನಾಗೆ …

    ಬಾಲಿವುಡ್‌ನಲ್ಲಿ ‘ಮಿಲ್ಕಿ ಬ್ಯೂಟಿ’ ಎಂದೇ ಜನಪ್ರಿಯರಾಗಿರುವ ಕರೀನಾ ಕಪೂರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷಗಳಾಗಲಿವೆ. ಕರೀನಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ‘ರೆಫ್ಯೂಜಿ’ ಬಿಡುಗಡೆಯಾಗಿ ಜೂನ್ ಕೊನೆಗೆ 20 ವರ್ಷಗಳಾಗಲಿವೆ.

    ಕರೀನಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಈಗಾಗಲೇ ಎರಡು ದಶಕಗಳಾಬೇಕಿತ್ತು ಮತ್ತು ಕರೀನಾ ಅಭಿನಯದ ಮೊದಲ ಚಿತ್ರ ‘ರೆಫ್ಯೂಜಿ’ ಬದಲು ಇನ್ನೊಂದಾಗಬೇಕಿತ್ತು ಎಂಬ ವಿಷಯ ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಕೇಳಿ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಹೃತಿಕ್ ರೋಶನ್ ಜತೆಜತೆಗೆ ಕರೀನಾ ಸಹ ‘ಕಹೋ ನಾ ಪ್ಯಾರ್ ಹೇ’ ಚಿತ್ರದಲ್ಲಿ ನಟಿಸಬೇಕಿತ್ತು.

    ಇದನ್ನೂ ಓದಿ: ಶಾರೂಖ್​ ಅಷ್ಟೊಂದು ಹಣ ಹೇಗೆ ಸಂಪಾದಿಸ್ತಾರೆ ಗೊತ್ತಾ?

    ಅಮ್ಮ ಮಾಡಿದ ಕೆಲಸದಿಂದ ಸಮಸ್ಯೆ ಆಗಿದ್ದು ಕರೀನಾಗೆ ...

    ಹೌದು, ‘ಕಹೋ ನಾ ಪ್ಯಾರ್ ಹೇ’ ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದು ಕರೀನಾ ಕಪೂರ್. ಒಂದೆರೆಡು ದಿನಗಳ ಚಿತ್ರೀಕರಣ ಸಹ ಮಾಡಿದ್ದರು. ಆದರೆ, ಅವರ ತಾಯಿ ಬಬೀತಾ ಕಪೂರ್ ಮಾಡಿದ ಒಂದು ಯಡವಟ್ಟಿನಿಂದಾಗಿ, ಕರೀನಾ ಕಪೂರ್ ಅವರನ್ನು ಆ ಚಿತ್ರದಿಂದ ಕಿತ್ತೆಸೆಯಲಾಗಿತ್ತು.

    ಇಷ್ಟಕ್ಕೂ ಆಗಿದ್ದೇನೆಂದರೆ, ತಮ್ಮ ಮಗ ಹೃತಿಕ್ ಎದರು ಸೂಕ್ತ ನಾಯಕಿಯ ಹುಡುಕಾಟದಲ್ಲಿ ರಾಕೇಶ್ ರೋಶನ್ ಅವರಿದ್ದಾಗ, ಸಿಕ್ಕಿದ್ದು ಕರೀನಾ ಕಪೂರ್. ರಾಕೇಶ್ ರೋಶನ್ ಮತ್ತು ಕರೀನಾ ಅಪ್ಪ ರಣಧೀರ್ ಇಬ್ಬರೂ, ಹಳೆಯ ದೋಸ್ತಿಗಳು. ತಮ್ಮ ಮಗನ ಜತೆಗೆ ಆಕೆಯನ್ನೂ ಚಿತ್ರರಂಗಕ್ಕೆ ಪರಿಚಯಿಸಿದಂತಾಗುತ್ತದೆ ಎಂದು ಕರೀನಾರನ್ನು ಆಯ್ಕೆ ಮಾಡಿದ್ದರು ರಾಕೇಶ್ ರೋಶನ್. ಹೃತಿಕ್ ಮತ್ತು ಕರೀನಾ ಅಭಿನಯದಲ್ಲಿ ‘ಕಹೋ ನಾ ಪ್ಯಾರ್ ಹೇ’ ಶೂಟಿಂಗ್ ಸಹ ಶುರುವಾಗಿತ್ತು. ಆದರೆ, ಬಬಿತಾ ಕಪೂರ್ ಅವರಿಂದಾಗಿ ಕರೀನಾ ಚಿತ್ರದಿಂದ ಹೊರಬರಬೇಕಾಯಿತು.

    ಇದನ್ನೂ ಓದಿ: ನವಾಜುದ್ದೀನ್ ಸಿದ್ಧೀಕಿಗೆ ಎದುರಾಯ್ತು ಮತ್ತೊಂದು ಕಂಟಕ!

    ‘ಕಹೋನಾ ಪ್ಯಾರ್ ಹೇ’ ಚಿತ್ರೀಕರಣ ಪ್ರಾರಂಭವಾಗಿ ಒಂದೆರೆಡು ದಿನಗಳಾಗುತ್ತಿದ್ದಂತೆಯೇ, ಬಬಿತಾ ಕಪೂರ್ ತಲೆ ತೂರಿಸುವುದಕ್ಕೆ ಪ್ರಾರಂಭಿಸಿದರಂತೆ. ಹಾಡಿನ ಶೂಟಿಂಗ್ ಯಾಕೆ ಮಾಡುತ್ತೀರಿ, ಮೊದಲು ಯಾವುದಾದರೂ ದೃಶ್ಯ ತೆಗೆಯಿರಿ, ಅದು ಮಾಡಿ, ಇದು ಮಾಡಿ … ಎಂದು ಶುರುವಿಟ್ಟುಕೊಂಡರಂತೆ. ಹೇಳಿಕೇಳಿ, ರಾಕೇಶ್ ರೋಶನ್ ಅವರು ‘ಕರಣ್ ಅರ್ಜುನ್’, ‘ಖೂನ್ ಭರೀ ಮಾಂಗ್’ನಂತಹಹಿಟ್ ಚಿತ್ರಗಳನ್ನು ಕೊಟ್ಟವರು. ದೊಡ್ಡ ದೊಡ್ಡ ಸ್ಟಾರ್‌ಗಳನ್ನು ನಿರ್ದೇಶಿಸಿದವರು. ಅಂತಹವರು ಈ ತರಹದ ಕಿರಿಕಿರಿಗಳನ್ನು ನಿರೀಕ್ಷಿಸಿರಲಿಲ್ಲ.

    ಯಾವಾಗ ಬಬಿತಾ ಅವರು ತಲೆ ತೂರಿಸುವುದು ಹೆಚ್ಚಾಯಿತೋ, ನಿಮ್ಮ ಸಹವಾಸವೇ ಬೇಡ ಎಂದು ದೂರ ಇಟ್ಟರು. ಕರೀನಾ ಬದಲು ಅಮೀಶಾ ಪಟೇಲ್ ಅವರನ್ನು ನಾಯಕಿಯಾಗಿ ಪರಿಚಯಿಸಿದರು. ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಸಹ ಆಯಿತು.

    ಬಹುಶಃ ಬಬಿತಾ ಕಪೂರ್ ತಲೆ ತೂರಿಸದೇ ಹೋಗಿದ್ದರೆ, ಕರೀನಾ ಮೊದಲ ಚಿತ್ರ ‘ಕಹೋ ನಾ ಪ್ಯಾರ್ ಹೇ’ ಆಗುತಿತ್ತು. ಆದರೆ, ಅದು ಕೈತಪ್ಪಿದ್ದರಿಂದ ‘ರೆಫ್ಯೂಜಿ’ ಮೂಲಕ ಕರೀನಾ ಚಿತ್ರರಂಗಕ್ಕೆ ಎಂಟ್ರಿ ಕೊಡುವಂತಾಯಿತು. ಪುಣ್ಯಕ್ಕೆ ‘ರೆಫ್ಯೂಜಿ’ ಸಹ ಒಂದು ಮಟ್ಟಕ್ಕೆ ಗೆದ್ದು, ಕರೀನಾಗೆ ಹೆಸರು ತಂದುಕೊಟ್ಟಿತು. ಅದೂ ಮಿಸ್ ಆಗಿದ್ದರೆ, ಏನಾಗುತಿತ್ತೋ ಗೊತ್ತಿಲ್ಲ.

    ಅಮಿತಾಭ್ ಬಿಚ್ಚಿಟ್ಟ 47 ವರ್ಷಗಳ ಹಿಂದಿನ ಕಥೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts