More

    ದುಬಾರಿ ಸೀತೆ; 12 ಕೋಟಿ ರೂ. ಸಂಭಾವನೆ ಕೇಳಿದರಂತೆ ಕರೀನಾ

    ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಎರಡನೇ ಮಗುವಿನ ಸಲುವಾಗಿ ಕೊಂಚ ನಟನೆಯಿಂದ ಅಂತರ ಕಾಯ್ದುಕೊಂಡಿದ್ದ ಅವರು, ಇದೀಗ ಮತ್ತೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾರೆ. ವಿಶೇಷ ಏನೆಂದರೆ, ಈ ಮೊದಲು ಪಡೆಯುತ್ತಿದ್ದ ಸಂಭಾವನೆಗಿಂತ ಹೆಚ್ಚಿನ ಮೊತ್ತವನ್ನೇ ಕರೀನಾ ಪಡೆಯುತ್ತಿರುವುದು ವಿಶೇಷ. ಹೌದು, ಅಲೌಕಿಕ್ ದೇಸಾಯಿ ನಿರ್ದೇಶನದಲ್ಲಿ ಸಿದ್ಧವಾಗಲಿರುವ ‘ಸೀತೆ’ ಚಿತ್ರದಲ್ಲಿ ಕರೀನಾ ಟೈಟಲ್ ರೋಲ್ ಮಾಡಲಿದ್ದಾರೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ ಸಂಭಾವನೆ ವಿಚಾರವಾಗಿ ಈ ಚಿತ್ರ ಸದ್ದು ಮಾಡುತ್ತಿದೆ.

    ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 12 ಕೋಟಿ ರೂ. ಡಿಮಾಂಡ್ ಮಾಡಿದ್ದಾರಂತೆ ಕರೀನಾ! ಇಲ್ಲಿಯವರೆಗೂ ಒಂದು ಸಿನಿಮಾಕ್ಕೆ ಏನಿಲ್ಲ ಅಂದರೂ 6ರಿಂದ 8 ಕೋಟಿ ಸಂಭಾವನೆ ಪಡೆಯುತ್ತಿದ್ದ ಕರೀನಾ, ‘ಸೀತಾ’ ಚಿತ್ರಕ್ಕೆ 12 ಕೋಟಿ ಪಡೆಯುವುದಕ್ಕೂ ಬಲವಾದ ಕಾರಣವಿದೆ. ಪೌರಾಣಿಕ ಹಿನ್ನೆಲೆಯ ಸಿನಿಮಾ ಎಂಬುದು ಒಂದೆಡೆಯಾದರೆ, ಅದಕ್ಕಾಗಿ ಸರಿ ಸುಮಾರು ಎಂಟು ತಿಂಗಳ ಕಾಲ್​ಶೀಟ್ ಅನ್ನು ನೀಡಿದ್ದಾರಂತೆ. ಹಾಗಾಗಿ, ಇಷ್ಟೊಂದು ದೊಡ್ಡ ಸಂಭಾವನೆಯನ್ನು ಅವರು ಕೇಳಿದ್ದಾರೆ. ಮೊದಲಿಗೆ, ಈಗಾಗಲೇ ಒಪ್ಪಿಕೊಂಡಿರುವ ‘ವೀರೇ ದಿ ವೆಡ್ಡಿಂಗ್ -2’ ಚಿತ್ರದ ಶೂಟಿಂಗ್ ಮುಗಿಸಿ, ಬಳಿಕ ‘ಸೀತೆ’ಗೆ ತಯಾರಿನಡೆಸಲಿದ್ದಾರೆ ಕರೀನಾ. -ಏಜೆನ್ಸೀಸ್

    ಗೃಹಿಣಿ ಆಗುತ್ತಿರುವ ಬಾಲೆಯರು!; ಬಾಲ್ಯವನ್ನೇ ಕಸಿಯುತ್ತಿದೆ ಕರೊನಾ..

    ಅರ್ಥವ್ಯವಸ್ಥೆ ಪುನಶ್ಚೇತನಕ್ಕೆ ಡೈರೆಕ್ಟ್ ಮಾನೆಟೈಸೇಶನ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts