More

  ಇದೇ ಮೊದಲ ಬಾರಿಗೆ ಯಶ್​ ಜತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮೂವರು ಹೀರೋಯಿನ್; ಟಾಕ್ಸಿಕ್​ನಿಂದ ಹೊರಬಿತ್ತು ಬಿಗ್​ ಅಪ್ಡೇಟ್​

  ಬೆಂಗಳೂರು: ಕೆಜಿಎಫ್​ ಸರಣಿ ಬಳಿಕ ನಟ ಯಶ್​ ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್​ ದಾಸ್​ ನಿರ್ದೇಶನ ಟಾಕ್ಸಿಕ್​​ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಶೂಟಿಂಗ್​ ಆರಂಭಕ್ಕೂ ಈ ಸಿಸನಿಮಾ ಒಂದಿಲ್ಲೊಂದು ಕಾರಣಕ್ಕೆ ಸಿನಿರಸಿಕರ ಗಮನ ಸೆಳೆದಿದ್ದು, ಇದೀಗ ಮತ್ತೊಂದು ವಿಚಾರಕ್ಕೆ ಚಿತ್ರತಂಡ ಸದ್ದು ಮಾಡುತ್ತಿದೆ.

  ಒಂದಲ್ಲ ಒಂದು ಕಾರಣಕ್ಕೆ ಟಾಕ್ಸಿಕ್​ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಚಿತ್ರದಲ್ಲು ಬಹುತಾರಾಗಣವಿರುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ಪುರಕವಂಬಂತೆ ಚಿತ್ರದಲ್ಲಿ ಬಾಲಿವುಡ್​ ಬೆಡಗಿಯರಾದ ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾನಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

  Yash Toxic

  ಇದನ್ನೂ ಓದಿ: ಭಾರತ ಪ್ರವಾಸ ಬೆನ್ನಲ್ಲೇ ಸಿನಿಮಾಗೆ ಕಮ್​ಬ್ಯಾಕ್​ ಮಾಡಿದ ಪ್ರಿಯಾಂಕಾ ಚೋಪ್ರಾ

  ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕರಾ ಕರೀನಾ ಕಪುರ್​ ಚಿತ್ರದಲ್ಲಿ ಯಶ್​ ಸಹೋದರಿ ಪಾತ್ರ ಮಾಡುತ್ತಿದ್ದು, ಕಿಯಾರಾ ಅಡ್ವಾಮಿ ಹಾಗೂ ಮತ್ತೋರ್ವ ಚೆಲುವೆ ಯಶ್​ಗೆ ನಾಯಕಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ಮೂಲಗಳ ಪ್ರಕಾರ ಶ್ರುತಿ ಹಾಸನ್​ ಅಥವಾ ಮೃಣಾಲ್​ ಠಾಕೂರ್​ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

  ಚಿತ್ರದಲ್ಲಿ ಯಾವೆಲ್ಲಾ ನಟಿಮಣಿಯರು ಯಶ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ಅಂತಿಮವಾಗಿ ಚಿತ್ರತಂಡದಿಂ ಅಧಿಕೃತವಾಗಿ ತಿಳಿದು ಬರಬೇಕಿದೆ. ಶೂಟಿಂಗ್​ ಶುರುವಾಗುವುದಕ್ಕೂ ಮುನ್ನ ಟಾಕ್ಸಿಕ್​ ಸಿನಿಮಾ ಸಿನಿರಸಿಕರ ತಲೆ ಕೆಡಿಸಿದ್ದು, ಚಿತ್ರದ ಅಪ್ಡೇಟ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts