More

  ಕಾಂಗ್ರೆಸ್ ಅಭ್ಯರ್ಥಿ ಕರಪತ್ರವಿಟ್ಟು ವಾಮಾಚಾರ

  ಕಾರಟಗಿ: ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ವಿವಿಧ ಆಮಿಷವೊಡ್ಡಿರುವ ಅಭ್ಯರ್ಥಿಗಳು, ಎದುರಾಳಿಯನ್ನು ಸೋಲಿಸಲು ವಾಮಾಚಾರದ ಮಾರ್ಗವನ್ನೂ ಕಂಡುಕೊಂಡಿದ್ದಾರೆ.

  ಆರ್‌ಜಿ ರಸ್ತೆಯಲ್ಲಿ 10ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಮೆಗೂರುರ ಕರಪತ್ರವಿಟ್ಟು ಶನಿವಾರ ರಾತ್ರಿ ವಾಮಾಚಾರ ನಡೆಸಲಾಗಿದೆ. ತೆಂಗಿನ ಕಾಯಿ, ನಿಂಬೆ ಹಣ್ಣು, ಮಡಿಕೆ, ಕುಂಬಳಕಾಯಿ, ಊದುಬತ್ತಿ, ಎಲೆ, ಅಡಿಕೆ, ಅಂಗದ ವಸ್ತ್ರ, ದೃಷ್ಟಿಗೊಂಬೆ, ಕುಂಕುಮ, ಅರಿಶಿನ ಹಾಕಿ ವಿಕಾರ ರೂಪದಲ್ಲಿ ಪೂಜೆ ಮಾಡಲಾಗಿದೆ.

  ಇದರಿಂದ ಮತದಾರರು ಹಾಗೂ ಅಭ್ಯರ್ಥಿ ಭಯಭೀತರಾಗಿದ್ದಾರೆ. ಆಮಿಷಗಳನ್ನೊಡ್ಡಿ ಮತಬೇಟೆಗೆ ಮುಂದಾಗಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳ ನಡೆ ತೀರ್ವ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಈಗ ವಾಮಾಚಾರದಂತ ಕೃತ್ಯ ನಡೆದಿರುವುದು ವ್ಯಾಪಕ ಟೀಕೆಗೊಳಪಟ್ಟಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts