ಬಿಜೆಪಿ ಗೆಲ್ಲಿಸಿದರೆ ನಮ್ಮ ಕಾಲನ್ನು ನಾವೇ ಕತ್ತರಿಸಿಕೊಂಡಂತೆ

1 Min Read
ಬಿಜೆಪಿ ಗೆಲ್ಲಿಸಿದರೆ ನಮ್ಮ ಕಾಲನ್ನು ನಾವೇ ಕತ್ತರಿಸಿಕೊಂಡಂತೆ
ಶೃಂಗೇರಿ ತಾಲೂಕಿನ ಶಿಡ್ಲೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ತ್ರಿಮೂರ್ತಿ, ಭಾಗ್ಯಾ, ಚಂದ್ರಶೇಖರ್, ಸಂಧ್ಯಾ ಇತರರಿದ್ದರು.

ಶೃಂಗೇರಿ: ಭಾರತೀಯ ಜನತಾ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದಲ್ಲಿ ನಮ್ಮ ಕಾಲು ನಾವೇ ಕತ್ತರಿಸಿಕೊಂಡಂತೆ ಕಷ್ಟ ಅನುಭವಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಮೆಣಸೆ ಗ್ರಾಪಂ ಶಿಡ್ಲೆಯಲ್ಲಿ ಶುಕ್ರವಾರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಿ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ 10 ವರ್ಷದಲ್ಲಿ ಜಾತಿ, ಮತ ವಿಷ ಬೀಜ ಬಿತ್ತಿ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದೆ. ಚುನಾವಣೆಗೂ ಮುನ್ನ ಹೇಳುವುದೊಂದು ಚುನಾವಣೆ ನಂತರ ಮಾಡುವುದು ಇನ್ನೊಂದು ಬಿಜೆಪಿ ಲಕ್ಷಣ. ಧರ್ಮಗಳ ನಡುವೆ ಕಂದಕ ಸೃಷ್ಟಿಸಿದೆ. ದೇಶದ ಹಿತಕ್ಕಾಗಿ, ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಕಾನುವಳ್ಳಿ ಕೃಷ್ಣಪ್ಪ ಗೌಡ ಮಾತನಾಡಿ, ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಯೋಜನೆ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಅಧಿಕಾರ ಪಡೆದ ಕಾಂಗ್ರೆಸ್ ಎಲ್ಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸಿದೆ. ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಸಂಸದರಾದ ಅಲ್ಪಾವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿ ಎಲ್ಲರಿಗೂ ಪರಿಚಿತರಾಗಿದ್ದಾರೆ. ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕು ಎಂದು ಕೋರಿದರು.
ಕುಂಚೆಬೈಲಿನಲ್ಲಿ ಪ್ರಚಾರ ನಡೆಸಲಾಯಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ನಾಯ್ಕ, ಉಪಾಧ್ಯಕ್ಷೆ ಭಾಗ್ಯಾ, ಮುಖಂಡರಾದ ಮೇಗಳಬೈಲು ಚಂದ್ರಶೇಖರ್, ಮಂಜುನಾಥ್, ನವೀನ್, ತ್ರಿಮೂರ್ತಿ, ಎಸ್.ತಿಮ್ಮಪ್ಪ ಇತರರಿದ್ದರು.

See also  ಸಮಾಜ ಅಭಿವೃದ್ಧಿಗೆ ಪತ್ರಿಕೆಗಳು ಅವಶ್ಯ: ಶ್ರೀ ಮರುಳಾರಾಧ್ಯ ಶಿವಾಚಾರ್ಯರ ಆಶೀರ್ವಚನ
Share This Article