More

    ಶೀಘ್ರ ರಸಗೊಬ್ಬರ ಪೂರೈಸುವಂತೆ ರಸಗೊಬ್ಬರ ಕ್ರಿಮಿನಾಶಕ ಬೀಜ ಮಾರಾಟಗಾರರ ಸಂಘ ಮನವಿ

    ಕಾರಟಗಿ: ತಾಲೂಕಿಗೆ ಅಗತ್ಯ ರಸಗೊಬ್ಬರ ಪೂರೈಸಲು ಕೃಷಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಶಾಸಕ ಬಸವರಾಜ ದಢೇಸುಗೂರಗೆ ರಸಗೊಬ್ಬರ ಕ್ರಿಮಿನಾಶಕ ಬೀಜ ಮಾರಾಟಗಾರರ ಸಂಘ ತಾಲೂಕು ಘಟಕ ಸೋಮವಾರ ಮನವಿಪತ್ರ ಸಲ್ಲಿಸಿತು.

    ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಗಳು ಆರಂಭಗೊಂಡಿವೆ. ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು ಮೆಕ್ಕೆಜೋಳ ಸೇರಿದಂತೆ ಒಣ ಬೇಸಾಯ ಬೆಳೆಗಳ ಬಿತ್ತನೆ ಕಾರ್ಯ ಆರಂಭಗೊಂಡಿವೆ. ಇತ್ತೀಚೆಗೆ ಮುನಿರಾಬಾದ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯಲ್ಲೂ ಜು.10ರಿಂದ ಕಾಲುವೆಗೆ ನೀರು ಹರಿಸಲು ನಿರ್ಧರಿಸಿದ್ದು, ಭತ್ತ ನಾಟಿಯೂ ಭರದಿಂದ ಸಾಗಲಿದೆ. ಹೀಗಾಗಿ ತಾಲೂಕಿನಲ್ಲಿ ಡಿಎಪಿ, 10-26-26 ಹಾಗೂ ಯೂರಿಯಾ ರಸಗೊಬ್ಬರದ ಕೊರೆತಯಿದೆ. ಶೀಘ್ರ ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದ ಕಂಪನಿಗಳಿಗೆ ಕೃಷಿ ಸಚಿವರು ಹಾಗೂ ಇಲಾಖೆ ಸೂಚಿಸಬೇಕು. ಶಾಸಕರು ಸಂಬಂಧಿಸಿದವರೊಂದಿಗೆ ಚರ್ಚಿಸಿ ನಿರ್ದೇಶನ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

    ಅಲ್ಲದೇ, ನೂತನವಾಗಿ ಅಸ್ತಿತ್ವಕ್ಕೆ ಬಂದ ರಸಗೊಬ್ಬರ ಕ್ರಿಮಿನಾಶಕ ಬೀಜ ಮಾರಾಟಗಾರರ ಸಂಘಕ್ಕೆ ಆಡಳಿತ ಕಚೇರಿ ನಿರ್ಮಿಸಲು ಪಟ್ಟಣದಲ್ಲಿ ನಿವೇಶನದ ಅಗತ್ಯವಿದ್ದು, ಸಂಘಕ್ಕೆ ಸೂಕ್ತ ನಿವೇಶನ ನೀಡಲು ಪುರಸಭೆಗೆ ಸೂಚಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು. ಸಂಘದ ಅಧ್ಯಕ್ಷ ಸಂಗಮೇಶಗೌಡ ಬೂದಗುಂಪಾ, ಪದಾಧಿಕಾರಿಗಳಾದ ಅಮರೇಶಪ್ಪ ಚಿನಿವಾಲ್, ಶಿವಶರಣಪ್ಪ ಕುಲಕರ್ಣಿ, ವಿಶ್ವನಾಥರೆಡ್ಡಿ ಕೆಂಗಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts