More

    ವಿವಾದಿತ ಜಾಗ ಸ್ವಚ್ಛತೆಗೆ ಮುಂದಾದ ಶಾಸಕ ನೇತೃತ್ವದ ತಂಡ: ಹಳೇಜೂರಟಗಿ ಗ್ರಾಮಸ್ಥರಿಂದ ತರಾಟೆ

    ಕಾರಟಗಿ: ಹಳೇಜೂರಟಗಿ ಗ್ರಾಮದ ಸರ್ವೇ ನಂ.11ರ ಸರ್ಕಾರಿ ಜಾಗ ಸ್ವಚ್ಛತೆಗೆ ಶಾಸಕ ಬಸವರಾಜ ದಢೇಸುಗೂರು, ತಹಸೀಲ್ದಾರ್ ಎಂ.ಬಸವರಾಜ ನೇತೃತ್ವದ ತಂಡ ಶುಕ್ರವಾರ ಎರಡು ಜೆಸಿಬಿಗಳೊಂದಿಗೆ ಏಕಾಏಕಿ ತೆರಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಗ್ರಾಮದ ರಾಜ್ಯಹೆದ್ದಾರಿ ಪಕ್ಕದಲ್ಲಿರುವ ಸರ್ವೇ ನಂ.11ರ ಸರ್ಕಾರಿ ಜಾಗ ಮತ್ತು ಸರ್ವೇ ನಂ.12ರ ಖಾಸಗಿ ಜಾಗದಲ್ಲಿ ಹಲವು ವರ್ಷಗಳಿಂದ ಗೊಂದಲ ಉಂಟಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಸರಿಯಾಗಿ ಹದ್ದುಬಸ್ತು ಮಾಡಿಲ್ಲ. ಇಲ್ಲಿ 17ಕ್ಕೂ ಹೆಚ್ಚು ಬಡಕುಟುಂಬಗಳು ಹಲವು ವರ್ಷಗಳಿಂದ ವಾಸ ಇವೆ. ಕೆಲ ವರ್ಷಗಳ ಹಿಂದೆ ಎರಡು ಸರ್ವೇ ನಂಬರ್‌ಗಳ ಗೊಂದಲ ಉಂಟಾಗಿ ಸ್ಥಳೀಯರ ನಡುವ ಗಲಾಟೆ ನಡೆದು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿವೆ. ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಾಸಕ ಬಸವರಾಜ ದಢೇಸುಗೂರು, ತಹಸೀಲ್ದಾರ್ ಎಂ.ಬಸವರಾಜ ನೇತೃತ್ವದ ಅಧಿಕಾರಿಗಳ ತಂಡ ಏಕಾಏಕಿ ಎರಡು ಜೆಸಿಬಿಗಳಿಂದ ಜಾಗ ಸ್ವಚ್ಛತೆಗೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಮರ್ಲಾನಹಳ್ಳಿ ಗ್ರಾಪಂ ಅಧ್ಯಕ್ಷೆ ಸಿ.ಎಚ್.ರವಿನಂದ, ಸದ್ಯಸ್ಯ ಹನುಮಂತಪ್ಪ ಭಂಗಿ ಸೇರಿದಂತೆ ಸ್ಥಳೀಯರು ಯಾವುದೇ ಮಾಹಿತಿ ನೀಡದೆ ಸ್ವಚ್ಛತೆಗೆ ಮುಂದಾಗಿರುವುದು ಸರಿಯಲ್ಲ ತರಾಟೆಗೆ ತೆಗೆದುಕೊಂಡರು.

    ಖಾಸಗಿ ಜಾಗದ ಮಾಲೀಕರು ಮತ್ತು ಸರ್ವೇ ನಂ.11ರ ಸರ್ಕಾರಿ ಜಾಗವೆಂದು ಬಡಕುಟುಂಬಗಳು ವಾಸವಿರುವವರೊಂದಿಗೆ ಶಾಂತಿ ಸಭೆ ನಡೆಸಿ ಅವರ ಮನವೊಲಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು. ಬಳಿಕ ಬಡಕುಟುಂಬಗಳ ವಾಸಕ್ಕೆ ಜಾಗ ನೀಡಬೇಕು. ಉಳಿದ ಸ್ಥಳದಲ್ಲಿ ಸರ್ಕಾರಿ ಸೌಲಭ್ಯಗಳಿಗೆ ಬಳಸಿಕೊಳ್ಳಲು ಯಾರ ಅಭ್ಯಂತರವಿಲ್ಲ ಎಂದು ಸ್ಥಳೀಯರು ತಿಳಿಸಿದರು.

    ಸರ್ಕಾರಿ ಜಾಗದಲ್ಲಿ ಸಮುದಾಯವೊಂದರ ಭವನ ನಿರ್ಮಿಸುತ್ತೇನೆಂದು ಅಧಿಕಾರಿಗಳ ತಂಡ ಕಟ್ಟಿಕೊಂಡು ಜೆಸಿಬಿಗಳೊಂದಿಗೆ ಆಗಮಿಸಿದ ಶಾಸಕ ಬಸವರಾಜ ದಢೇಸುಗೂರು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದರು. ಗ್ರೇಡ್-2ತಹಸೀಲ್ದಾರ್ ಎಂ.ವಿಶ್ವನಾಥ, ತಾಪಂ ಇಒ ಡಾ.ಡಿ.ಮೋಹನ್, ಪಿಐ ವೀರಭದ್ರಯ್ಯ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts