More

    ಸಾಲಕ್ಕೆ ಸಾವು ಒಂದೇ ಪರಿಹಾರವಲ್ಲ; ಶಾಸಕ ಬಸವರಾಜ ದಢೇಸುಗೂರು

    ಕಾರಟಗಿ: ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು ವಿವಿಧ ಕಾರಣಗಳಿಂದ ಸಾಲಕ್ಕೊಳಗಾದರೆ ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ತಾಲೂಕಿನ ಚಳ್ಳೂರಿನಲ್ಲಿ ಕೃಷಿ ಸಾಲದಿಂದ ಆತ್ಮಹತ್ಯೆಗೊಳಗಾದ ರೈತರ ಕುಟುಂಬಸ್ಥರಿಗೆ ಭಾನುವಾರ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು. ರೈತರು ದೇಶದ ಬೆನ್ನೆಲುಬು. ಕೃಷಿ ಚಟುವಟಿಕೆಗಳಲ್ಲಿ ಲಾಭ-ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಜೀವನದಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆಗಳಿವೆ. ಸಮಸ್ಯೆಗಳಿಗೆ ಅಂಜಿ ಸಾವಿಗೆ ಶರಣಾಗಬಾರದು. ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕುಟುಂಬದವರ ಮುಂದಿನ ಸ್ಥಿತಿಯನ್ನು ಅವಲೋಕಿಸಬೇಕು. ಪ್ರತಿಯೊಬ್ಬ ಅನ್ನದಾತರು ಉತ್ತಮ ಜೀವನ ನಡೆಸಬೇಕು ಎಂದರು.

    ಚಳ್ಳೂರು ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಹೇಮಂತ್ ರಾಜ್ ಹಾಗೂ ಗಂಗಮ್ಮ ಮೇಟಿ ಕುಂಟುಬಸ್ಥರಿಗೆ ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಶಾಸಕರು ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಆಕಸ್ಮಿಕ ಮರಣಕ್ಕೆ ತುತ್ತಾದ ರೈತ ಬಸವರಾಜಪ್ಪ ಕುಟುಂಬಸ್ಥರಿಗೂ ಸಹ 2 ಲಕ್ಷ ರೂ. ಪರಿಹಾರ ನೀಡಿದರು.

    ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳ್ಳಿ, ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ಮೋಹನ್ ರಾವ್, ಶ್ರೀಶೈಲಗೌಡ, ಗೋಪಾಲ್ ರಾವ್, ಶಿವಕುಮಾರ, ಪಂಪಣ್ಣ ಮೇಟಿ, ದಸ್ತಗಿರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts