More

    ಕನ್ನಡ ಬಳಕೆಯಲ್ಲಿ ತಪ್ಪು : ಸರಿಪಡಿಸಲು ಒತ್ತಾಯ

    ಹಟ್ಟಿಚಿನ್ನದಗಣಿ: ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದ್ವೀಪಥ ರಸ್ತೆಯ ಇಕ್ಕೆಲಗಳಲ್ಲಿ ಲೋಕೋಪಯೋಗಿ ಇಲಾಖೆ ಬರೆಸಿದ ಬೋರ್ಡುಗಳಲ್ಲಿ ಕನ್ನಡ ಶಬ್ದಗಳು ತಪ್ಪಾಗಿ ಮುದ್ರಿತವಾಗಿವೆ. ಕರ್ನಾಟಕದಲ್ಲೆ ಕನ್ನಡ ಭಾಷೆ ಯನ್ನು ಇಲಾಖೆಗಳು ತಪ್ಪಾಗಿ ಅರ್ಥೈಸಿದಂತಾಗಿದೆ.

    ಇದನ್ನೂ ಓದಿ: ವೈಶಿಷ್ಟ್ಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ನಾಗರಿಕರಿಗೆ ಬಿಬಿಎಂಪಿ ಮನವಿ

    ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯದ ಹೆಸರು ಸೇರಿ ಹಲವು ಹೆಸರುಗಳನ್ನು ತಪ್ಪಾಗಿ ಬರೆಸಲಾಗಿದೆ. ಮಾನವಿ ತಾಲೂಕಿನ ಚಿಂಚಿರಕಿ ಗ್ರಾಮದ ಹೆಸರನ್ನು ಚಿಂಚಿಲ್‌ಕಿ ಎಂದು ಪಾಮನಕಲ್ಲೂರು ಕ್ರಾಸ್ ಬಳಿ, ಸಮೀಪದ ತವಗ ಗ್ರಾಮದ ಹೆಸರನ್ನು ತಾವಾಗಾ ಎಂದು ತಪ್ಪಾಗಿ ಬರೆಯಲಾಗಿದೆ. ಅದೆ ರೀತಿ ರಸ್ತೆಯುದ್ದಕ್ಕೂ ಸಿರವಾರ, ರಾಯಚೂರು, ಆನ್ವರಿ ಸೇರಿ ನಾನಾ ಊರುಗಳ ಹೆಸರುಗಳನ್ನು ತಪ್ಪಾಗಿ ಬರೆಸಲಾಗಿದೆ.

    ಪಟ್ಟಣದ ಕಾಕಾ ನಗರದಿಂದ ಪಾಮನಕಲ್ಲೂರು ಕ್ರಾಸ್‌ವರೆಗೆ ದ್ವಿಪಥ ರಸ್ತೆ ನಿರ್ಮಿಸಲಾಗಿದೆ. ನಿರ್ಮಾಣ ಸಮಯದಲ್ಲಿ ರಸ್ತೆಯ ಇಕ್ಕೇಲಗಳಲ್ಲಿ ಕೆಲ ಊರುಗಳ ಹೆಸರುಗಳನ್ನು ಮಾತ್ರ ಬರೆಸಲಾಗಿದೆ. ಅರೆ-ಬರೆ ತಪ್ಪು ಹೆಸರುಗಳನ್ನು ಬರೆಸಿ ಅರ್ಧಕ್ಕೆ ಕೈಬಿಟ್ಟಿದ್ದಾರೆ. ರಸ್ತೆ ನಿರ್ಮಿಸಿ 6-7 ವರ್ಷಗಳೆ ಗತಿಸಿದರೂ ಸರಿಪಡಿಸಿಲ್ಲ.

    ಕನ್ನಡ ಭಾಷೆ ಬಳಕೆಯ ಜ್ಞಾನವಿಲ್ಲದೆ ಸರ್ಕಾರಿ ಇಲಾಖೆಯವರು ಬೋರ್ಡನ್ನು ತಪ್ಪಾಗಿ ಬರೆಸಿದ್ದಾರೆ. ಇದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ. ಕೂಡಲೆ ಸಂಬಂಧಪಟ್ಟವರು ಸರಿಪಡಿಸಬೇಕು.
    ಮೌನೇಶ ತಪ್ಪಲದೊಡ್ಡಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts