More

    ಕನ್ನಡ ವಿವಿಯಿಂದ ಮೂರು ಜನರಿಗೆ ನಾಡೋಜ

    ಹೊಸಪೇಟೆ: ಸಮಾಜದಲ್ಲಿ ಸಾಧನೆಗೈದ ಮೂರು ಜನರಿಗೆ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

    ಇದನ್ನೂ ಓದಿ: ಹಂಪಿ ಉತ್ಸವಕ್ಕೆ ನಾಲ್ಕು ವೇದಿಕೆ

    32ನೇ ನುಡಿಹಬ್ಬದ ಘಟಿಕೋತ್ಸವದ ನಿಮಿತ್ತ ವಿವಿಯ ಮಂಟಪ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಸಮಾಜ ಸೇವೆಯಲ್ಲಿ ಕನ್ನಡ ಸ್ವಾಮಿ ಎಂದು ಪ್ರಖ್ಯಾತಿಯಾಗಿರುವ ಬಿದರ್ ಜಿಲ್ಲೆಯ ಬಾಲ್ಕಿ ಹಿರೆಮಠದ ಡಾ.ಬಸವಲಿಂಗ ಪಟ್ಟದೇವರು, ಶಿಕ್ಷಣ ಕ್ಷೇತ್ರದಲ್ಲಿ ಆಂದ್ರ ಪ್ರದೇಶದ ಬುಡಕಟ್ಟು ವಿವಿಯ ಕುಲಪತಿ ಡಾ.ತೇಜಸ್ವಿ ವಿ.ಕಟ್ಟೀಮನಿ, ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ನ್ಯಾನೋ ಟೆಕ್ನಾಲಜಿ ವಿದ್ವಾಂಸ, ನ್ಯಾಕ್ ನಿವೃತ್ತ ನಿರ್ದೇಶಕ ಡಾ.ಎಸ್.ಸಿ.ಶರ್ಮಾ ಅವರಿಗೆ ಆಯ್ಕೆ ಮಾಡಲಾಗಿದೆ.
    ಜ.10ರ ಸಂಜೆ 5.30ಕ್ಕೆ ನಡೆಯುವ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮೂರು ಜನರಿಗೆ ನಾಡೋಜ ಪ್ರಧಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಡಿಲಿಟ್ ಹಾಗೂ ಪಿಎಚ್ ಡಿ ಪರವಿ ಪ್ರಧಾನ ಮಾಡಲಿದ್ದಾರೆ. ಅನಂತಪುರಂನ ಆಂದ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಎಸ್‌.ಎ.ಕೋರಿ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.

    ಘೋಷಣೆ ಮುನ್ನವೇ ಹೆಸರುಗಳ ಲೀಕ್


    ನಾಡೋಜ ಪದವಿ ಕುಲಪತಿಗಳು ಘೋಷಣೆ ಮಾಡುವ ಮುನ್ನವೇ ಬಿದರ್ ಜಿಲ್ಲೆಯ ಬಾಲ್ಕಿ ಹಿರೆಮಠದ ಡಾ.ಬಸವಲಿಂಗ ಪಟ್ಟದೇವರು ಅವರ ಶುಭಾಶಯದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ನಾಡೋಜ ಪದವಿಯ ಗೌಪ್ಯತೆ ಕಾಪಾಡಿದರು, ಆಹ್ವಾನ ಪತ್ರಿಕೆ ಪ್ರಿಂಟಿಂಗ್ ವೇಳೆ ಇದು ಲಿಕ್ ಆಗಿರಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts