More

    ಹಂಪಿ ಉತ್ಸವಕ್ಕೆ ನಾಲ್ಕು ವೇದಿಕೆ

    ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ.02 ರಿಂದ ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವದ ಸಿದ್ಧತೆಗಾಗಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಇಂದು ಸ್ಥಳ ಪರಿಶೀಲನೆ ನಡೆಸಿದರು.

    ಇದನ್ನೂ ಓದಿ : ಹಂಪಿ ಉತ್ಸವ ಯಶಸ್ಸಿಗೆ ಶ್ರಮಿಸಿ

    ಕಳೆದ ಬಾರಿ ಉತ್ಸವದಲ್ಲಿ ನಿರ್ಮಿಸಲಾದ ವೇದಿಕೆ ಸ್ಥಳಗಳಾದ ಗಾತ್ರಿಪೀಠ ವೇದಿಕೆ, ಎದುರು ಬಸವಣ್ಣ ಮಂಟಪ. ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ಸಾಸಿವೆಕಾಳು ಗಣಪತಿ ಸ್ಮಾರಕ, ಆನೆಲಾಯ ಸ್ಮಾರಕ ಹಾಗೂ ಪ್ರದರ್ಶನ ಸೇರಿ ಇತರೆ ಕಡೆ ಹಾಕಲಾಗಿದ್ದ ವೇದಿಕೆ ಹಾಗೂ ಕಾರ್ಯಕ್ರಮಗಳ ಸ್ಥಳಗಳಿಗೆ ಭೇಟಿ ನೀಡಿದರು. ಪೂರಕ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ಕಳೆದ ಬಾರಿಯಂತೆ ಈ ಬಾರಿ ಕೂಡ ನಾಲ್ಕು ವೇದಿಕೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಸ್ಥಳ ನಿಗದಿ ಮಾಡಲಾಗಿದೆ. ವಿಜಯನಗರ ವೈಭವವನ್ನು ಪ್ರತಿಬಿಂಬಿಸುವ ತುಂಗಾ ಆರತಿ, ಹಂಪಿ ಬೈ ನೈಟ್, ಹಂಪಿ ಬೈಸ್ಕೃ ಆಯೋಜಿಸಲಾಗುವುದು. ಉತ್ಸವದಲ್ಲಿ ಕುಸ್ತಿ ಸ್ಪರ್ಧೆ, ಮೆಹಂದಿ, ರಂಗೊಲಿ ಸ್ಪರ್ಧೆ, ಕರಕುಶಲ ವಸ್ತುಗಳ ಪ್ರದರ್ಶನ, ದೇಸಿ ಆಹಾರ, ಫಲಪುಷ್ಪ ಪ್ರದರ್ಶನ, ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಫೋಟೋ ಸ್ಪರ್ಧೆ, ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳ ಜತೆಯಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ವಿವರ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಳೆದ ಉತ್ಸವದಲ್ಲಿ ನಡೆದ ಗಾಯಿತ್ರಿ ಪೀಠ, ಎದುರು ಬಸವಣ್ಣ ಮಂಟಪ, ಮಾಧ್ಯಮ ಗ್ಯಾಲರಿ, ಗ್ರೀನ್ ರೂಂ, ಮಳಿಗೆಗಳು, ಪಾರ್ಕಿಂಗ್ ಪ್ರದೇಶ, ವಿರುಪಾಕ್ಷೇಶ್ವರ ದೇವಸ್ಥಾನ ಆವರಣ ಮತ್ತಿತರ ಕಡೆಗಳಲ್ಲಿ ಓಡಾಡಿ ಪರಿಶೀಲಿಸಿದರು. ಕೈಗೊಂಡ ಎಲ್ಲ ಸಿದ್ಧತೆಗಳನ್ನು ಈ ಬಾರಿಯೂ ಮಾಡಬೇಕು. ಯಾವುದಕ್ಕೂ ಕೊರತೆಯಾಗಬಾರದು. ಏನೇ ಸಮಸ್ಯೆ ಅಥವಾ ಗೊಂದಲವಿದ್ದರೆ ಮಾತನಾಡಿ ಪರಿಹರಿಸಿಕೊಳ್ಳಬೇಕು. ಉತ್ಸವ ಅದ್ಧೂರಿ ಹಾಗೂ ರ‍್ಥಪರ‍್ಣವಾಗಿಸುವ ದಿಸೆಯಲ್ಲಿ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಸೂಚನೆ ನೀಡಲಾಗುವುದು.

    ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಅಪರಜಿಲ್ಲಾಧಿಕಾರಿ ಜಿ.ಅನುರಾಧ, ಉಪವಿಭಾಗಿಯಾಧಿಕಾರಿ ಎನ್.ಮೊಹಮ್ಮದ್ ಅಲಿ ಅಕ್ರಂ ಶಾ, ಕೃಷಿ ಜಂಟಿ ನರ‍್ದೇಶಕ ಶರಣಪ್ಪ ಮುದುಗಲ್ ಇತರರಿದ್ದರು.

    ಸಮೀಪ ಪರ್ಕಿಂಗ್

    ಹಂಪಿಯಲ್ಲಿ ಮೂರು ದಿನ ನಡೆಯುವ ಹಂಪಿ ಉತ್ಸವದಲ್ಲಿ ಈ ಹಿಂದೆ ಕಮಲಾಪುರ, ಕಡ್ಡಿರಾಂಪುರ ಕ್ರಾಸ್, ಕಡ್ಡಿರಾಂಪುರ ಸೇರಿ ಇತರೆ ಕಡೆ ಪರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸಮೀಪ ಮಾಡುವ ಹಿನ್ನೆಲೆಯಲ್ಲಿ ಹಂಪಿ ಸುತ್ತಮುತ್ತ ಹೊಲಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಳೆ ಕಟಾವು ಆದ ಮೇಲೆ ರೈತರ ಬಳಿ ಮಾತನಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


    ಹಂಪಿ ಉತ್ಸವ ನಡೆಸಲು ಸದ್ಯ ಸ್ಥಳ ಪರಿಶೀಲಿನ ಮಾಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಎಷ್ಟೆ ಕರ‍್ಯಕ್ರಮಗಳಿಗೆ ಸಿದ್ದತೆ ನಡೆಸಲಾಗಿದೆ. ವೇದಿಕೆಗಳ ಬಳಿ ಸ್ವಚ್ಛತೆ ನಡೆಸೇರಿ ಇತರೆ ಕಾರ್ಯ ನಡೆಸಬೇಕು. ಕ್ರಮಕೈಗೊಳ್ಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ.

    ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ, ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts