More

    ಕಸಾಪ ಸಭಾಂಗಣಗಳ ಬಾಡಿಗೆ ಇಳಿಕೆ

    ಬೆಂಗಳೂರು: ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರೋತ್ಸಾಹಿಸಲು, ಕನ್ನಡಪರ ಕಾರ್ಯಕ್ರಮಗಳಿಗೆ ಹೆಚ್ಚು ಅವಕಾಶ ಕಲ್ಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತನ್ನ ಸಭಾಂಗಣಗಳ ಬಾಡಿಗೆಯನ್ನು ಇಳಿಕೆ ಮಾಡಿದೆ.

    ಶ್ರೀಕೃಷ್ಣರಾಜ ಪರಿಷತ್ತು ಮಂದಿರದ ಬಾಡಿಗೆಯನ್ನು ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಳಿಕೆ ಮಾಡಲಾಗಿದೆ. ಪೂರ್ತಿ ದಿನಕ್ಕೆ 20 ಸಾವಿರ ರೂ. ಗಳಿದ್ದ ಬಾಡಿಗೆ ಸೋಮವಾರದಿಂದ ಶುಕ್ರವಾರದವರೆಗೆ 15 ಸಾವಿರಕ್ಕೆ, ಅರ್ಧ ದಿನಕ್ಕೆ 10 ಸಾವಿರದಿಂದ 7 ಸಾವಿರಕ್ಕೆ ಇಳಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

    ಅದೇ ರೀತಿ ಇಡೀ ದಿನಕ್ಕೆ 5,500 ರೂ. ಗಳಿದ್ದ ಅಕ್ಕ ಮಹಾದೇವಿ ಸಭಾಂಗಣದ ಬಾಡಿಗೆಯನ್ನು 4 ಸಾವಿರಕ್ಕೆ, ಅರ್ಧ ದಿನಕ್ಕೆ 3 ಸಾವಿರದಿಂದ 2 ಸಾವಿರ ರೂ. ಗಳಿಗೆ ತಗ್ಗಿಸಲಾಗಿದೆ. ನವೀಕೃತ ಕುವೆಂಪು ಸಭಾಂಗಣದಲ್ಲೇ ಕಸಾಪ ಆಡಳಿತ ಕಚೇರಿಯೂ ಕಾರ್ಯನಿರ್ವಹಿಸುವುದರಿಂದ ಸಂಜೆ 5.50ರಿಂದ ರಾತ್ರಿ 9 ಗಂಟೆವರೆಗೆ ಬಾಡಿಗೆಗೆ ನೀಡಲಾಗುತ್ತದೆ. ಈ ಅವಧಿಗೆ 3 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ರಜಾ ದಿನ ಮತ್ತು ಭಾನುವಾರ ಅರ್ಧ ದಿನಕ್ಕೆ 4 ಸಾವಿರ ಹಾಗೂ ಪೂರ್ಣ ದಿನಕ್ಕೆ 7 ಸಾವಿರ ರೂ. ಬಾಡಿಗೆ ಪಡೆಯಲಾಗುತ್ತದೆ.

    ಮೊಗ್ಲಿಂಗ್ ಸ್ಟುಡಿಯೋ: ಕುವೆಂಪು ಸಭಾಂಗಣವು ಸಂಪೂರ್ಣ ನವೀಕರಣಗೊಂಡಿದ್ದು, ಪರಂಪರೆಯ ಹಿರಿಮೆ ಮತ್ತು ಆಧುನಿಕತೆಯ ಅಗತ್ಯ ಎರಡನ್ನೂ ಒಳಗೊಂಡು ಹೊಸತನವನ್ನು ಪಡೆದುಕೊಂಡಿದೆ. ಈ ಸಭಾಂಗಣದ ಆವರಣದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ವನ್ನು ಹೊರತಂದ ಹರ್ಮನ್ ಮೊಗ್ಲಿಂಗ್ ಹೆಸರಿನಲ್ಲಿ ಸುಸಜ್ಜಿತ ಸ್ಟುಡಿಯೋ ಸ್ಥಾಪಿಸಲಾಗಿದ್ದು, ಇಲ್ಲಿ ಆನ್‌ಲೈನ್ ಕಾರ್ಯಕ್ರಮಗಳು, ಸುದ್ದಿಗೋಷ್ಠಿ ಮತ್ತು ಸಭೆಗಳನ್ನು ನಡೆಸಬಹುದಾಗಿದೆ. ಈ ಸ್ಟುಡಿಯಯೋಗೆ ಅರ್ಧ ದಿನಕ್ಕೆ 2 ಸಾವಿರ ರೂ. ಬಾಡಿಗೆಯಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳ ಬೇಕೆಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts