More

    ಸಾಧಕರಲ್ಲದವರಿಗೆ ರಾಜ್ಯೋತ್ಸವ ಪ್ರಶಸ್ತಿ: ಹಾಸನ ರಂಗಭೂಮಿ ಕಲಾವಿದರ ಆಕ್ರೋಶ

    ಹಾಸನ: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ರಂಗಭೂಮಿ ಕ್ಷೇತ್ರದ ಸಾಧಕರ ಆಯ್ಕೆಯಲ್ಲಿ ತಾರತಮ್ಯ ಮಾಡಿದ್ದು ಸರ್ಕಾರ ಪ್ರಶಸ್ತಿಯನ್ನು ಮಾರಾಟಕ್ಕಿಟ್ಟಿದೆ ಎಂದು ರಂಗಭೂಮಿ ಕಲಾವಿದ ಗ್ಯಾರಂಟಿ ರಾಮಣ್ಣ ಆರೋಪಿಸಿದರು.

    ಡಾ. ಹಂಪನಹಳ್ಳಿ ತಿಮ್ಮೇಗೌಡ, ಅನುಸೂಯಮ್ಮ ಹಾಗೂ ವೆಂಕೋಜಿರಾವ್ ಎಂಬವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಹಂಪನಹಳ್ಳಿ ತಿಮ್ಮೇಗೌಡ ಹೊರತುಪಡಿಸಿ ಉಳಿದ ಇಬ್ಬರು ರಂಗಭೂಮಿಯಲ್ಲಿ ಯಾವ ಸಾಧನೆ ಮಾಡಿದ್ದಾರೆ, ಅವರು ಹಾಸನದವರಾ ಎಂಬ ಮಾಹಿತಿ ಇದುವರೆಗೂ ತಿಳಿದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

    ಈ ಇಬ್ಬರ ಹೆಸರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ. ಇಂತಹವರನ್ನು ಆಯ್ಕೆ ಮಾಡಿದ್ದು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗದಾಗಿದೆ. ಸಾಧಕರ ಆಯ್ಕೆ ಮಾಡುವಾಗ ಆ ಕ್ಷೇತ್ರದ ಇತರರನ್ನು ಕೇಳಬೇಕೆಂಬ ಪರಿಜ್ಞಾನ ಸರ್ಕಾರಕ್ಕೆ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇದೇ ಪ್ರಮಾದ ಮುಂದುವರಿದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ಕಲಾವಿದರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಯರೇಹಳ್ಳಿ ಮಂಜೇಗೌಡ, ಶೇಖರಪ್ಪ, ಧರ್ಮಣ್ಣ, ನಾಗಮೋಹನ್ ಇದ್ದರು.

    ಬಿಲೀವರ್ಸ್​ ಈಸ್ಟರ್ನ್ ಚರ್ಚ್​ ನಲ್ಲಿ ಕೋಟ್ಯಂತರ ರೂಪಾಯಿ ಹವಾಲಾ ವಹಿವಾಟು: ಐಟಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts