More

    ಕಲ್ಮಠದಿಂದ ಕಲಾವಿದರ ಪರಿಚಯಿಸುವ ಕಾರ್ಯ

    ಕವಿತಾಳ: ಕಲ್ಮಠದ ಸಾರ್ವಜನಿಕ ಸೇವೆಯು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.

    ಕಲ್ಮಠದ ಸಾರ್ವಜನಿಕ ಸೇವೆಯು ಶ್ಲಾಘನೀಯ

    ಪಟ್ಟಣದಲ್ಲಿ ಸೋಮವಾರ ಸಂಜೆ ಕಲ್ಮಠದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು ಕಾರ್ತಿಕ ದೀಪೋತ್ಸವ ಹಾಗೂ 12ನೇ ಜ್ಞಾನ ವಾಹಿನಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇದನ್ನೂ ಓದಿ: ಚಳಿಗಾಲದ ಸೂಪರ್ ಫುಡ್ ಬಿಳಿ ಎಳ್ಳು ತಿಂದ್ರೆ ಮಲಬದ್ಧತೆ ಸೇರಿದಂತೆ ಈ ಸಮಸ್ಯೆಗಳು ಮಾಯವಾಗುತ್ತೆ!

    ಮಠದ ನೂತನ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತಾಗಿದೆ. ಪ್ರತಿ ತಿಂಗಳು ಹುಣ್ಣಿಮೆದಿನದಂದು ಜ್ಞಾನ ವಾಹಿನಿ ಕಾರ್ಯಕ್ರಮ ಆಯೋಜಿಸಿ ನಾಡಿಗೆ ಕಲಾವಿದರನ್ನು ಪರಿಚಯಿಸುತ್ತಿರುವುದು ಮಠದ ಕೀರ್ತಿ ಹೆಚ್ಚಿಸಿದಂತಾಗಿದೆ ಎಂದರು.

    ಅಭಿನವ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಸಾಹಿತ್ಯ ಪರಿಷತ್‌ನಿಂದ ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಮಾಜಿ ಅಧ್ಯಕ್ಷ ಮಾಹಾಂತೇಶ ಮಸ್ಕಿ, ಪರಿಷತ್ತ ಸಿರವಾರ ತಾಲೂಕು ಅಧ್ಯಕ್ಷ ಸುರೇಶ ಹೀರಾ, ಪ್ರಮುಖರಾದ ತಿಮ್ಮಯ್ಯಶೆಟ್ಟಿ, ವೆಂಕಟೇಶ ಬೇವಿನಬೆಂಚಿ, ಶಂಕ್ರಯ್ಯಸ್ವಾಮಿ, ಸಂಗಪ್ಪ ಗೊರೆಬಾಳ, ಶಿವಪುತ್ರಪ್ಪ ಗವಾಯಿ, ಶಿವರಾಜ ನೆಲಕೋಳ, ಅಮರೇಶ ದಿನ್ನಿ, ಜಂಬಣ್ಣ ಕವಿ, ಶೇಖರಪ್ಪ ಸಹುಕಾರ ಹಟ್ಟಿ, ಬಸಪ್ಪ ಕಂದಗಲ್, ಉದಯ ಇಲ್ಲೂರು ಶೆಟ್ಟಿ, ಸುಭಾಷ ಚಕೋಟಿ, ನಿವೃತ್ತ ಶಿಕ್ಷಕ ಅಮರಪ್ಪ ಯತಗಲ್, ಜಾನಪದ ಕಲಾವಿದೆ ಬಸವಲಿಂಗಮ್ಮ ಅಮೀನಗಡ ಇನ್ನಿತರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts