More

    ಕಲ್ಮಠ ಶಿಕ್ಷಣ ಸಂಸ್ಥೆಯಲ್ಲಿ ಅವ್ಯವಹಾರ

    ಕಂಪ್ಲಿ: ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

    ಲೋಕಾಯುಕ್ತ ನಿರೀಕ್ಷಕ ಮಹಮ್ಮದ್ ರಫಿ ಮಾತನಾಡಿ, ಸಭೆಯಲ್ಲಿ ಒಟ್ಟು ಹನ್ನೊಂದು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಲ್ಮಠದ ಪ್ರಭುಸ್ವಾಮೀಜಿ ಅರ್ಜಿ ಸಲ್ಲಿಸಿದ್ದು, ಕಲ್ಮಠ ಪ್ರಭುಸ್ವಾಮಿಗಳ ಪ್ರೌಢಶಾಲೆ ಮತ್ತು ಗುರುಸಿದ್ಧೇಶ್ವರ ವಿದ್ಯಾಸಂಸ್ಥೆಯಿಂದ 2.50ಕೋಟಿ ರೂ. ಅವ್ಯವಹಾರವಾಗಿದ್ದು ತನಿಖೆಗೊಳಪಡಿಸುವಂತೆ ಕೋರಿದರೆ, ಶ್ರೀ ಪ್ರಭುಸ್ವಾಮಿಗಳ ಪ್ರೌಢಶಾಲೆ ಮುಖ್ಯಶಿಕ್ಷಕ ಎ.ಎಂ.ಬಸವರಾಜ ಅವರು ಮಾನಸಿಕ ಹಿಂಸೆ, ದೌರ್ಜನ್ಯ, ಹಣಬೇಡಿಕೆ ನೀಡುತ್ತಾರೆಂದು ಚಿತ್ರಕಲಾ ಶಿಕ್ಷಕ ಬಿ.ಮಹೇಶ್ ಕುಮಾರ್ ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಇದನ್ನೂ ಓದಿ:ಅವ್ಯವಹಾರ ತನಿಖೆಗೆ ಆಗ್ರಹ

    ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾ ಅಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ್ ಇವರು ಶಾಶ್ವತ ಅನುದಾನರಹಿತ ಕೆಲ ಶಾಲೆಗಳಿಗೆ ನಿವೇಶನ ನೀಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ವಸತಿ ವಿನ್ಯಾಸಕ್ಕೆ ಅನುಮತಿ ಪಡೆದು ವಾಣಿಜ್ಯಕಟ್ಟಡ ನಿರ್ಮಿಸಿದ ಅನಧಿಕೃತ ಕಟ್ಟಡಗಳ ಬಗ್ಗೆ ಹಾಗೂ ಕಂಪ್ಲಿ ಸೋಮಪ್ಪ ಕೆರೆ ಅಭಿವೃದ್ಧಿಪಡಿಸಲು ಪುರಸಭೆ 8.08 ಕೋಟಿ ರೂ. ಅವೈಜ್ಞಾನಿಕವಾಗಿ ತೆರಿಗೆ ಹಣ ಬಳಸಿದೆ, ಜನವಸತಿ ಮಧ್ಯೆ ಇರುವ ಅನಿಲ ಸಂಗ್ರಹ ಗೋದಾಮು ಸ್ಥಳಾಂತರ, ಗೌರಮ್ಮ ಮತ್ತು ವಿಠ್ಠಲಾಪುರ ಕೆರೆ ಒತ್ತುವರಿ ತೆರೆವು, ಅನಧಿಕೃತವಾಗಿ ಹರ್ಬಲ್ ನ್ಯೂಟ್ರಿಷಿಯನ್ ಆಹಾರ ಮಾರಾಟ, ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಡುಗೆ ಸಿಬ್ಬಂದಿ, ರಾಜ್ಯ ಉಗ್ರಾಣ ನಿಗಮದ ಕೆಲಸಗಾರರನ್ನು ಮರು ನೇಮಕಗೊಳಿಸಬೇಕೆಂದು ಅರ್ಜಿಗಳು ಸಲ್ಲಿಕೆಯಾಗಿದ್ದು, ಇತ್ಯರ್ಥಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಮಹಮ್ಮದ್ ರಫಿ ತಿಳಿಸಿದರು.

    ಸಭೆಯಲ್ಲಿ ತಹಸೀಲ್ದಾರ್ ಶಿವರಾಜ, ಪುರಸಭೆ ಸಿಒ ಕೆ.ದುರುಗಣ್ಣ, ಅಧಿಕಾರಿಗಳಾದ ಡಾ.ಜಿ.ಅರುಣ, ಮಹ್ಮದ್‌ಶಫಿ, ಟಿ.ಎಂ.ಬಸವರಾಜ, ಡಾ.ಕೆ.ಯು.ಬಸವರಾಜ, ಬಸಪ್ಪ, ಅಪರಂಜಿ, ಎಸ್.ಡಿ.ರಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts