More

    ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಪ್ರಥಮ

    ಸೋಮವಾರಪೇಟೆ: ಕೊಡಗು ಜಿಲ್ಲಾ ಮತ್ತು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಸುವರ್ಣ ಸಂಭ್ರಮದ ವತಿಯಿಂದ ಇತ್ತೀಚೆಗೆ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದ ಪ್ರೌಢಶಾಲಾ ನೃತ್ಯ ವಿಭಾಗದಲ್ಲಿ ಪಟ್ಟಣದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆ ಪ್ರಥಮ, ಸಾಂದೀಪನಿ ಪ್ರೌಢಶಾಲೆ ದ್ವಿತೀಯ ಹಾಗೂ ಓಎಲ್‌ವಿ ಕಾನ್ವೆಂಟ್ ತೃತೀಯ ಸ್ಥಾನ ಪಡೆದಿದೆ.

    ಪಿಯು ಕಾಲೇಜು ವಿಭಾಗದಲ್ಲಿ ಸೋಮವಾರಪೇಟೆಯ ಬಿಟಿಸಿಜಿ ಕಾಲೇಜು(ಪ್ರ), ಸಂತ ಜೋಸೆಫರ ಕಾಲೇಜು(ದ್ವಿ) ಜೂನಿಯರ್ ಕಾಲೇಜು(ತೃ), ಪದವಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಸಂತ ಜೋಸೆಫರ ಪದವಿ ಕಾಲೇಜು (ಪ್ರ) ಸ್ಥಾನ ಗಳಿಸಿದೆ.

    ಪ್ರೌಢಶಾಲಾ ವಿಭಾಗದ ಕಥಾ ಸ್ಪರ್ಧೆಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಕೆ.ಕೆ.ಪ್ರಜ್ಞಾ(ಪ್ರ), ತೋಳೂರು ಶೆಟ್ಟಳ್ಳಿ ಅಂಬೇಡ್ಕರ್ ಶಾಲೆಯ ಅಮೂಲ್ಯ ಮನೋಹರ್(ದ್ವಿ), ಕುವೆಂಪು ಶಾಲೆ ತ್ರಿಶಾಲ್‌ಗೌಡ(ತೃ), ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಸಂತ ಜೊಸೇಫರ ಶಾಲೆಯ ಬಿ.ಈ.ರಾಶೀದ( ಪ್ರ), ಬಿಟಿಸಿಜಿ ಕಾಲೇಜಿನ ಜಿ.ಡಿ.ಸಾಧನಾ(ದ್ವಿ), ಸಂತ ಜೋಸೆಫರ ಕಾಲೇಜಿನ ಬಿ.ಪಿ.ಪ್ರಜ್ಞಾ(ತೃ) ಸ್ಥಾನ ಗಳಿಸಿದ್ದಾರೆ.

    ಪ್ರೌಢಶಾಲಾ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಂದೀಪನಿ ಶಾಲೆಯ ಡಿ.ಸಿ.ರಕ್ಷಾ(ಪ್ರ), ಸಂತ ಜೋಸೆಫರ ಶಾಲೆಯ ಸೊಮಾಂಶೂ ವೈನೀಲ್(ದ್ವಿ), ಡಿ.ಆರ್.ಜಾನವಿ ಹಾಗೂ ಮಸಗೋಡು ಚನ್ನಮ್ಮ ಶಾಲೆಯ ಬಿ.ಪಿ.ಸ್ಪಂದನಾ ತೃತೀಯ ಸ್ಥಾನ ಪಡೆದಿದ್ದಾರೆ. ಪಿ.ಯು.ಕಾಲೇಜು ವಿಭಾಗದಲ್ಲಿ ಬಿಟಿಸಿಜಿ ಕಾಲೇಜಿನ ಅಮೃತಾ(ಪ್ರ), ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಎಂ.ದಿವಿನ್(ದ್ವಿ), ಬಿಟಿಸಿಜಿಯ ಒ.ಪಿ.ಪ್ರತೀಕ್ಷಾ(ತೃ)
    ಮಕ್ಕಳ ಛದ್ಮಾ ವೇಷ ಸ್ಪರ್ಧೆಯಲ್ಲಿ ಮನ್ವಿತ್, ನಿಶಾ (ಪ್ರ), ಪುನೀತ್‌ಶೆಟ್ಟಿ, ನಿಶ್ಮಿತಾ, ಲಾಂಛನ್(ದ್ವಿ) ಹಾಗೂ ಮೋಹಿತ್, ಆದಿತ್ಯ, ಲಹನ್(ತೃ) ಸ್ಥಾನ ಗಳಿಸಿದ್ದಾರೆ.

    ಪ್ರಾಥಮಿಕ ಶಾಲಾ ನೃತ್ಯ ವಿಭಾಗದಲ್ಲಿ ಓ ಎಲ್ ವಿ ಕಾನ್ವೆಂಟ್(ಪ್ರ), ಶನಿವಾರಸಂತೆ ತ್ಯಾಗರಾಜ ಕಾಲನಿ ಶಾಲೆ(ದ್ವಿ), ಕಲಾವೈಭವ ತಂಡ(ತೃ), ಪ್ರಾಥಮಿಕ ಸಮೂಹ ಗಾಯನ ಸ್ಪರ್ಧೆಯಲ್ಲಿ ಚನ್ನಮ್ಮ ಶಾಲೆ(ಪ್ರ), ಸಾಂದೀಪನಿ ಶಾಲೆ(ದ್ವಿ), ಸಂತ ಜೋಸೆಫರ ಶಾಲೆ(ತೃ), ಪ್ರೌಢಶಾಲಾ ಸಮೂಹ ಗಾಯನ ಸ್ಪರ್ಧೆ ವಿಭಾಗದಲ್ಲಿ ಸಂತ ಜೋಸೆಫರ ಪ್ರೌಢಶಾಲೆ(ಪ್ರ), ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆ(ದ್ವಿ), ಚೆನ್ನಮ್ಮ ಪ್ರೌಢಶಾಲೆ(ತೃ), ಕಾಲೇಜು ವಿಭಾಗದಲ್ಲಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು(ಪ್ರ) ಸ್ಥಾನ ಗಳಿಸಿದೆ.

    ಪದವಿ ಹಾಗೂ ಸಾರ್ವಜನಿಕ ವಿಭಾಗದ ಸಮೂಹ ಗಾಯನ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪದವಿ ಕಾಲೇಜು(ಪ್ರ), ಸಾಂದೀಪನಿ ಶಾಲೆಯ ಶಿಕ್ಷಕರು(ದ್ವಿ) ಕುವೆಂಪು ಶಾಲೆಯ ಶಿಕ್ಷಕರು(ತೃ), ಚಿತ್ರ ಬಿಡಿಸುವ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಸಂತ ಜೋಸೆಫರ ಶಾಲೆಯ ರಿಯಾನ ಸಿಕ್ವೇರಾ(ಪ್ರ), ಶಾಂತಿನಿಕೇತನ ಎಸ್.ಶಿವಪ್ರಸಾದ್(ದ್ವಿ), ಕುವೆಂಪು ಶಾಲೆಯ ಸಿ.ಜಿ.ಸಿರಿ(ದ್ವಿ), ಸಾಂದೀಪನಿ ಶಾಲೆಯ ಕೆ.ಟಿಪ್ರಜ್ಞಾ(ತೃ), ಪ್ರೌಢಶಾಲಾ ವಿಭಾಗದಲ್ಲಿ ಎಂ.ಎ. ಆಶಿಕ್(ಪ್ರ), ಕುವೆಂಪು ಶಾಲೆಯ ತೇಜಸ್ವಿನಿ(ದ್ವಿ), ಡೆಲಿಷ ಮುತ್ತಮ್ಮ, ಪ್ರತೀಕ್ಷಾ(ತೃ) ಸ್ಥಾನ ಗಳಿಸಿದ್ದಾರೆ. ಕಾಲೇಜು ವಿಭಾಗದಲ್ಲಿ ಪ್ರತೀಕ್ ಶೆಟ್ಟಿ(ಪ್ರ), ಪಿ.ಭುವನ್(ದ್ವಿ), ಬಿ.ಎ.ಅಶೋಕ್(ತೃ) ಸ್ಥಾನ ಗಳಿಸಿದ್ದಾರೆ.

    ನ.30ರಂದು ಮಧ್ಯಾಹ್ನ ಮಹಿಳಾ ಸಮಾಜದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ.ಮಂತರ್‌ಗೌಡ ಬಹುಮಾನ ವಿತರಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಮತ್ತಿತರರು ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts