More

    ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ

    | ಬೆಂಕಿ ಬಸಣ್ಣ ನ್ಯೂಯಾರ್ಕ್ 

    ಕಳೆದ ಎರಡು ವರ್ಷಗಳಿಂದ ಕರೊನಾ ಮಹಾಮಾರಿಯಿಂದ ತತ್ತರಿಸಿದ್ದ ಅಮೆರಿಕದಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಬರೀ ವರ್ಚುವಲ್ ಆಗಿ ನಡೆಯುತ್ತಿದ್ದವು. ಲಸಿಕೆಗಳು ಬಂದ ನಂತರ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಪರಿಣಾಮವಾಗಿ ನ್ಯೂಯಾರ್ಕ್ ರಾಜ್ಯದ ಅಲ್ಬನಿ ಕನ್ನಡ ಸಂಘವು ವರ್ಚುವಲ್ ಬದಲಿಗೆ ಭೌತಿಕ ಸಮಾವೇಶ ಮಾಡುವ ಧೈರ್ಯ ತೋರಿಸಿತು.

    ಎರಡು ವರ್ಷಗಳ ದೀರ್ಘ ಕಾಲದ ನಂತರ ಇಲ್ಲಿರುವ ಕನ್ನಡಿಗರೆಲ್ಲರೂ ಪರಸ್ಪರ ಭೆಟ್ಟಿಯಾಗಿ, ಮುಖಾಮುಖಿ ಮಾತನಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡುವ ಸುವರ್ಣ ಅವಕಾಶವನ್ನು ಕನ್ನಡ ರಾಜ್ಯೋತ್ಸವ 2021 ಒದಗಿಸಿಕೊಟ್ಟಿತು.

    ಈ ಕಾರ್ಯಕ್ರಮವನ್ನು ಅತ್ಯಂತ ಸಮರ್ಪಕವಾಗಿ ಆಯೋಜಿಸಿದ ಕೀರ್ತಿ ನಮ್ಮ ಅಲ್ಬನಿ ಕನ್ನಡ ಸಂಘದ ತ್ರಿದೇವಿಗಳಾದ ಅಧ್ಯಕ್ಷೆ ಸುಪ್ರಿಯಾ, ಕಾರ್ಯದರ್ಶಿ ದೀಪಾ ಮತ್ತು ಖಜಾಂಚಿ ಸುನಿತಾರಿಗೆ ಸಲ್ಲುತ್ತದೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಈ ವರ್ಷದ ವಿಶೇಷವೇನೆಂದರೆ, ನ್ಯೂಜೆರ್ಸಿಯ “ಮ್ಯೂಸಿಕ್ ಸ್ಪೀಕ್ಸ್ ” ತಂಡದ ಗಾಯಕರಾದ ಶ್ರೇಯಸ್ ಜೋಯಿಸ್, ಶ್ರೀಧರ್ ಸುಬ್ಬರಾವ್ ಮತ್ತು ಮಾನಸ ಪ್ರಸನ್ನ ಇವರುಗಳು ತಮ್ಮ ಸುಮಧುರ ಗಾಯನದಿಂದ ಕೇಳುಗರ ಮನಗಳನ್ನು ಸೂರೆಗೊಂಡರು. ಈ ಗಾಯಕರ ಜೋಶ್ ತುಂಬಿದ ಹಾಡುಗಳಿಗೆ ಸೇರಿದ್ದ ಜನ ಮೈಚಳಿ ಬಿಟ್ಟು ಡಾನ್ಸ್ ಮಾಡಿದರು.

    ಈ ಕಾರ್ಯಕ್ರಮವು ಉಮಾ ಶ್ರೀನಿವಾಸ್ ಮತ್ತು ಮಕ್ಕಳು ಹಾಡಿದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಇಲ್ಲಿಯ ಕನ್ನಡ ಕಲಿ ಶಾಲೆಯ ಪುಟಾಣಿಗಳು ಅಭಿನಯಿಸಿದ ಮೈಥಿಲಿ ದಿವಾಕರ ಮೂರ್ತಿ ಮತ್ತು ಸುನಿತಾ ನಿರ್ದೇಶನದ “ಪುಣ್ಯ ಕೋಟಿ” ನೃತ್ಯ-ನಾಟಕವು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ಜೀವಿಕಾ ಬೆಂಕಿ ಮತ್ತು ತನಿಷಾ ಮುರಳಿ ಮನೋಹರ ಜೋಡಿ ನೃತ್ಯವು ಸೂಪರ್ ಹಿಟ್ ಆಗಿತ್ತು. ಇಲ್ಲಿನ ಹೆಂಗಳೆಯರು ನಡೆಸಿಕೊಟ್ಟ ‘ಕಂಸಾಳೆ’ ನೃತ್ಯ ವಿಭಿನ್ನ ಅನುಭವವನ್ನು ಕೊಟ್ಟಿತು. ಶ್ರೀನಾಥ್ ನಿರ್ದೇಶನದ “ಯಮನಿಗೂ ಹೈ ಬಿಪಿ” ಎಂಬ ನಾಟಕದಲ್ಲಿ ಪ್ರದೀಪ್ ಅರಸಪ್ಪ, ರಾಜೀವ್ ಮಹಾಜನ್ ಮತ್ತು ಶ್ರೀನಿವಾಸ ಕುಮಾರಸ್ವಾಮಿ ತಮ್ಮ ನೈಜ ನಟನೆಯಿಂದ, ಚುರುಕಾದ ಸಂಭಾಷಣೆಗಳಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.

    ನಮ್ಮ ಕನ್ನಡ ಕಲಿ ಶಾಲೆಯ ಟೀಚರ್ ಲತಾ ಕಲಿಯತ್ ನಿರ್ದೇಶನದ ಪೌರಾಣಿಕ ನಾಟಕ ಹಿರಣ್ಯಕಶ್ಯಪು ಮತ್ತು ಭಕ್ತ ಪ್ರಹ್ಲಾದದಲ್ಲಿ ಪುಟಾಣಿಗಳಾದ ಶ್ಲೋಕ್, ಸಹನಾ, ವಚನ ಮತ್ತು ಅರ್ಜುನ್ ಭಾಗವಹಿಸಿದ್ದರು.

    ಇದನ್ನೂ ಓದಿ: ಇಲ್ಲಿ ರಾತ್ರಿ ಯಾರು ಬೇಕಾದರೂ ನಿರಾತಂಕವಾಗಿ ಸಂಚರಿಸಬಹುದು; ನೈಟ್​ ವಾಕ್​ಗೆ ಇದು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ!

    ಸುಚಿತಾ ಜಾಜು ಕೊರಿಯೋಗ್ರಫಿ ಮಾಡಿದ “ಹಳ್ಳಿ ಡಾನ್ಸ್”, ಉಮಾ ಬೆಂಕಿ ಸಂಘಟಿಸಿದ “ದಂಪತಿಗಳ-ಡಾನ್ಸ್” ಮತ್ತು ಸುಜಾತ ಶರತ್ ಕೋರಿಯಾಗ್ರಫಿ ಮಾಡಿದ ಶಿವಸ್ತುತಿ ಮತ್ತು ತಿಲ್ಲಾನ ಡಾನ್ಸ್ ಪ್ರಮುಖ ಆಕರ್ಷಣೆಯಾಗಿದ್ದವು. ಈ ಕಾರ್ಯಕ್ರಮದ ನಿರೂಪಣೆಯನ್ನು ಟೀನೇಜರ್ ವಿನಿಶಾಶ್ರೀ ಮತ್ತು ಇಷೆ ಪ್ರದೀಪ್ ಸೊಗಸಾಗಿ ನಡೆಸಿಕೊಟ್ಟರು.

    ಕಾರ್ಯಕ್ರಮಗಳ ಮಧ್ಯದಲ್ಲಿ ಸಿಂಚನ ಕೇಶವನ್, ಸಂಜೀವ ಮಹಾಜನ್ ಮತ್ತು ಉಮಾ ಶ್ರೀನಿವಾಸ್ ತಮ್ಮ ಕೋಗಿಲೆ ಕಂಠದಿಂದ ಸೊಗಸಾದ ಮಧುರ ಗೀತೆಗಳನ್ನು ಹಾಡಿದರು. ನಿಸ್ಕಯುನಾ ಹೈಸ್ಕೂಲಿಗೆ ವಾರ್ಸಿಟಿ ಟೆನ್ನಿಸ್ ಸ್ಪರ್ಧೆಯಲ್ಲಿ ಸೆಕ್ಷನಲ್ ಚಾಂಪಿಯನ್​ಶಿಪ್​ ಗೆದ್ದು ಕೊಟ್ಟು ನಂತರ ನ್ಯೂ ಯಾರ್ಕ್ ರಾಜ್ಯಮಟ್ಟದ ವಾರ್ಸಿಟಿ ಟೆನಿಸ್ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡೆದ, ನಮ್ಮ ಕನ್ನಡ ಕುವರಿ ಜೀವಿಕಾ ಬೆಂಕಿಯನ್ನು ಸನ್ಮಾನಿಸಲಾಯಿತು.

    ಇದನ್ನೂ ಓದಿ: ಕ್ರಿಕೆಟ್​ ಗಾಡ್ ಮತ್ತು ಡಾಗ್​: ಈ ನಾಯಿ ಕೀಪಿಂಗೂ ಮಾಡುತ್ತೆ, ಫೀಲ್ಡಿಂಗೂ ಮಾಡುತ್ತೆ; ಇದಕ್ಕೆ ಏನೆನ್ನೋಣ ಹೇಳಿ ಎಂದು ಕೇಳಿದ ಸಚಿನ್​

    ಅಲ್ಬನಿ ಕನ್ನಡ ಕಲಿ ಶಾಲೆಯ ಅಚ್ಚುಮೆಚ್ಚಿನ ಗುರುಗಳಾದ ಲತಾ ಕಲಿಯತ್ ಅವರ 75ನೇ ಹುಟ್ಟುಹಬ್ಬವನ್ನು ವೇದಿಕೆಯ ಮೇಲೆ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

    ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಂಗ ಶ್ರೀನಿವಾಸ್ ತಯಾರಿಸಿದ ಹೋಳಿಗೆ (ಒಬ್ಬಟ್ಟು), ಪೂರಿ, ಮಸಾಲೆ ವಡೆ, ಬಿಸಿಬೇಳೆ ಬಾತ್ ಮುಂತಾದ ಖಾದ್ಯಗಳ ಮೃಷ್ಟಾನ್ನ ಭೋಜನವನ್ನು ಸವಿದರು.

    ಅಮೆರಿಕದ ಬಹಳಷ್ಟು ಕನ್ನಡ ಸಂಘಗಳು ಈಗಲೂ ವರ್ಚುವಲ್ ಕಾರ್ಯಕ್ರಮ ಮಾಡುತ್ತಿರುವಾಗ ನಮ್ಮ ಅಲ್ಬನಿ ಕನ್ನಡ ಸಂಘವು ಭೌತಿಕವಾಗಿ ಹಾಗೂ ಭರ್ಜರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ಕೀರ್ತಿಗೆ ಪಾತ್ರವಾಯಿತು.

    ಅಮೆರಿಕದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಸಂಭ್ರಮದ ಕ್ಷಣಗಳು 

    ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts