More

  ಹಾಸ್ಯಭರಿತ ‘ದರ್ಬಾರ್’: 23 ವರ್ಷಗಳ ಬಳಿಕ ವಿ. ಮನೋಹರ್ ನಿರ್ದೇಶನಕ್ಕೆ

  ಬೆಂಗಳೂರು: ಸಂಗೀತ ನಿರ್ದೇಶಕ ವಿ. ಮನೋಹರ್ ಈ ಹಿಂದೆ ‘ಓ ಮಲ್ಲಿಗೆ’ ಚಿತ್ರವನ್ನು ನಿರ್ದೇಶಿಸಿದ್ದರು. ಅದಾಗಿ 23 ವರ್ಷಗಳ ಬಳಿಕ ‘ದರ್ಬಾರ್’ ಚಿತ್ರದ ಮೂಲಕ ನಿರ್ದೇಶನಕ್ಕೆ ಮನೋಹರ್ ಮರಳಿದ್ದಾರೆ.

  ಈ ಕುರಿತು ‘ನನ್ನ ಕೈಯಲ್ಲಿ ಏನಾಗುತ್ತೆ ಎಂದು ಸಂಶಯಪಟ್ಟ ಅನೇಕರಿಗೆ ಈ ಚಿತ್ರ ಉತ್ತರ. ಹಾಸ್ಯ ಎಂದರೆ ಕೇವಲ ಡಬಲ್ ಮೀನಿಂಗ್ ಎಂದು ಬಿಂಬಿಸುವ ಕಾಲ ಇದು. ಈ ಮಧ್ಯೆ ಒಂದಷ್ಟು ಪರಿಶುದ್ಧ ಹಾಸ್ಯವನ್ನು ಒಳಗೊಂಡು ತೆರೆ ಮೇಲೆ ಬರುತ್ತಿರುವ ಚಿತ್ರ ‘ದರ್ಬಾರ್’. ಇವತ್ತಿನ ರಾಜಕೀಯ ವಿಷಯವನ್ನು ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ಇದು’ ಎಂದು ವಿ. ಮನೋಹರ್ ಹೇಳಿಕೊಂಡಿದ್ದಾರೆ.

  ಈ ಚಿತ್ರದ ನಾಯಕ ಹಾಗೂ ನಿರ್ಮಾಪಕರಾದ ಸತೀಶ್, ‘ಒಂದು ಒಳ್ಳೆಯ ಕ್ವಾಲಿಟಿ ಸಿನಿಮಾ ಮಾಡಿದ್ದೇವೆ ಎಂಬ ಭರವಸೆಯಿದೆ’ ಎಂದರು. ನಾಯಕಿ ಜಾಹ್ನವಿ ಸೈಕಾಲಜಿ ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಕಾರ್ತಿಕ್, ಸಾಧು ಕೋಕಿಲ, ಸಂತು, ನವೀನ್ ಪಡೀಲ್ ಮುಖ್ಯ ಭೂಮಿಕೆಯಲ್ಲಿ ಇರಲಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಸಂಗೀತ ನಿರ್ದೇಶನವನ್ನೂ ಮಾಡಿದ್ದು, ಚಂದನ್ ಶೆಟ್ಟಿ ಹಾಗೂ ಉಪೇಂದ್ರ ತಲಾ ಒಂದು ಹಾಡಿಗೆ ಕಂಠದಾನ ಮಾಡಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಸತೀಶ್ ಬರೆದಿದ್ದು, ಸಾಮ್ರಾಟ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ‘ದರ್ಬಾರ್’ ಜೂನ್ 9ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts