More

    ಒಂದು ಫೋನ್​ ಕಾಲ್​ನಿಂದ ಹುಟ್ಟಿಕೊಂಡ ಕಥೆ ‘ರಾಂಚಿ’

    ಬೆಂಗಳೂರು: ಸಿನಿಮಾದವರಿಗೆ ಕಥೆಗಳು ಹೇಗೆ ಹೊಳೆಯುತ್ತವೆ ಎಂದು ಹೇಳುವುದು ಕಷ್ಟ. ಈ ಹಿಂದೆ ‘ಐಪಿಸಿ ಸೆಕ್ಷನ್ 300’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಶಶಿಕಾಂತ್​ ಅವರಿಗೆ ತಮ್ಮ ಹೊಸ ಚಿತ್ರಕ್ಕೆ ಕಥೆ ಹೊಳೆದಿದ್ದು ಒಂದು ಫೋನ್​ ಕಾಲ್​ ಮೂಲಕ ಎಂದರೆ ನಂಬಬೇಕು. ಆದರೂ ಇದು ನಿಜ. ಶಶಿಕಾಂತ್​ ನಿರ್ದೇಶನದ ಹೊಸ ಚಿತ್ರ ‘ರಾಂಚಿ’ಗೆ ಸ್ಫೂರ್ತಿಯಾಗಿದ್ದು ಒಂದು ಫೋನ್​ ಕಾಲ್​ ಅಂತೆ.

    ಇದನ್ನೂ ಓದಿ: ಹೆದರಿಸಲು ಬರುತ್ತಿದ್ದಾಳೆ ‘ಅಂಬುಜಾ’; ಟೀಸರ್​ ಬಿಡುಗಡೆ

    ಈ ಕುರಿತು ಮಾತನಾಡುವ ಅವರು, ‘ನಾನು ‘ಐಪಿಸಿ ಸೆಕ್ಷನ್ 300’ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ನನಗೆ ರಾಂಚಿಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ ಎನ್ನುತ್ತಾರೆ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ, ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು.

    ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ ‘ರಾಂಚಿ’ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ ಅವರು.

    ಪ್ರಭು ಮುಂಡ್ಕರ್ ಈ ಚಿತ್ದಲ್ಲಿ ನಾಯಕನಾಗಿ ನಟಿಸಿದ್ದಾರೆ. ನೈಜಘಟನೆ ಆಧಾರಿತ ಈ ಚಿತ್ರವನ್ನು ರಾಂಚಿಯಲ್ಲೇ ಹೆಚ್ಚಾಗಿ ಚಿತ್ರೀಕರಣ ಮಾಡಲಾಗಿದೆ. 2020ರಲ್ಲೇ ಸೆನ್ಸಾರ್ ಆಗಿತ್ತು. ಕರೊನಾದಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಯಿತು. ಚಿತ್ರದಲ್ಲಿ ದಿವ್ಯ ಉರುಡಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ನಟಿಸಿದ್ದಾರೆ.

    ಇದನ್ನೂ ಓದಿ: ಶಿವಪುರ ಗ್ರಾಮದ ಶಾಪದ ಕಥೆ ಚಿತ್ರವಾಗುತ್ತಿದೆ …

    ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣ‌ದ ಈ ಚಿತ್ರವು ನವೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ‘ಕಾಂತಾರ’ ಮತ್ತೊಂದು ದಾಖಲೆ; ಉತ್ತರಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts