More

    ಎಐಇಎಸ್‌ಎಲ್‌ನಿಂದ ನೇಮಕಾತಿಗೆ ಅಧಿಸೂಚನೆ; ಸಂಬಳ, ಹುದ್ದೆಗಳ ವಿವರ ಇಲ್ಲಿದೆ

    ಬೆಂಗಳೂರು: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ (AIESL) ಏರ್‌ಕ್ರಾಫ್ಟ್ ನಿರ್ವಹಣೆ, ದುರಸ್ತಿ ಹಾಗೂ ಕೂಲಂಕುಷ ಪರೀಕ್ಷೆ(ಎಂಆರ್‌ಒ) ಕೈಗೊಳ್ಳುವ ಸಂಸ್ಥೆಯಾಗಿದ್ದು, 2013ರಲ್ಲಿ ಸ್ಥಾಪನೆಗೊಂಡಿತು. ದೇಶದಲ್ಲಿ ಎಂಆರ್‌ಒ ಕಾರ್ಯ ಕೈಗೊಳ್ಳಲು ಡೈರೆಕ್ಟರೆಟ್ ಜನರಲ್ ಆಫ್ ಸಿವಿಲ್ ಆ್ಯವಿಯೇಷನ್(ಡಿಜಿಸಿಎ) ಹಾಗೂ ಇತರ ಅಂತಾರಾಷ್ಟ್ರೀಯ ನಿಯಂತ್ರಕ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ಎಐಇಎಸ್‌ಎಲ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು ಇಲ್ಲಿ ನೀಡಿರುವ ಮಾಹಿತಿ ಆಧರಿಸಿ ಅರ್ಜಿ ಸಲ್ಲಿಸಬಹುದು. 

    ಒಟ್ಟು ಹುದ್ದೆಗಳು: 100

    ಹುದ್ದೆಗಳ ವಿವರ 
    ಎರ್‌ಕ್ರಾಫ್ಟ್ ಟೆಕ್ನೀಷಿಯನ್
    ಟೆಕ್ನೀಷಿಯನ್

    ವಿದ್ಯಾರ್ಹತೆ 
    ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಐಟಿಐ/ ಡಿಪ್ಲೊಮಾ/ ಡಿಜಿಸಿಎ/ ಬಿಎಸ್ಸಿ/ ಬಿಇ/ ಬಿ.ಟೆಕ್/ ತತ್ಸಮಾನ ಪದವಿ ಪೂರ್ಣಗೊಳಿಸಿರಬೇಕು.

    ವಯೋಮಿತಿ
    ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 35 – ಗರಿಷ್ಠ ವಯಸ್ಸು 40 ವರ್ಷದೊಳಗಿರಬೇಕು.

    ವೇತನ
    ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 28,000ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ ಹೇಗೆ? 
    ಕೌಶಲ ಆಧಾರಿತ ಪರೀಕ್ಷೆ/ಟ್ರೆಡ್ ಟೆಸ್ಟ್, ಟೆಕ್ನಿಕಲ್ ಅಸೆಸ್‌ಮೆಂಟ್, ವೈಯಕ್ತಿಕ ಸಂದರ್ಶನದ ಮುಖೇನ ಸಮರ್ಥ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

    ಅರ್ಜಿ ಶುಲ್ಕ 
    ಜನರಲ್, ಇಡಬ್ಲ್ಯುಎಸ್, ಒಬಿಸಿ ಅಭ್ಯರ್ಥಿಗಳಿಗೆ 1,000ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

    ಅರ್ಜಿ ಸಲ್ಲಿಕೆ ಹೇಗೆ?
    ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಸಂವಹನದ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರತಿನ ಚೀಟಿ ಹೊಂದಿರಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಅದರ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಸಲ್ಲಿಸಬೇಕು.

    ಅರ್ಜಿ ಸಲ್ಲಿಕೆಯ ಅಂತಿಮ ದಿನ 
    23-02-2024

    ಹೆಚ್ಚಿನ ಮಾಹಿತಿಗಾಗಿ  
    www.aiesl.in

    ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ವಿದ್ಯಾರ್ಹತೆ, ವಯೋಮಿತಿ, ವೇತನ, ಪರೀಕ್ಷೆ ಮಾದರಿ ಇತರೆ ಮಾಹಿತಿ ಇಲ್ಲಿದೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts