ಮತ್ತೆ ದೇಗುಲದ ಹುಂಡಿ ಕಳವು; ಕಳ್ಳರಿಗೆ ಖಾಲಿ ಹುಂಡಿಯ ದರ್ಶನ: ಆಗಿದ್ದೇನು?

blank

ಬೆಂಗಳೂರು ಗ್ರಾಮಾಂತರ: ದೇಗುಲದ ಕಾಣಿಕೆ ಹುಂಡಿ ಮೇಲೆ ಕಣ್ಣು ಹಾಕಿದ್ದ ಖದೀಮರಿಗೆ ದೇವರೇ ಚಳ್ಳೆಹಣ್ಣು ತಿನ್ನಿಸಿದ್ದಾನೆ, ಹಣವಿಲ್ಲದ ಹುಂಡಿ ಕದ್ದ ಕಳ್ಳರು ಖಾಲಿ ಹುಂಡಿ ನೋಡಿ ಬೇಸ್ತು ಬಿದ್ದಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂದು ಹುಂಡಿ ಎಸೆದು ಕಾಲ್ಕಿತ್ತಿದ್ದಾರೆ.

ಇಂಥದ್ದೊಂದು ಪ್ರಕರಣ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಹುಲುಕುಡಿ ಶ್ರೀವೀರಭದ್ರಸ್ವಾಮಿ ದೇವಾಲಯದಲ್ಲಿ ಗುರುವಾರ ರಾತ್ರಿ ನಡೆದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹುಲುಕುಡಿ ಬೆಟ್ಟದ ಮೇಲಿರುವ ಶ್ರೀವೀರಭದ್ರಸ್ವಾಮಿ ದೇವಾಲಯದ ಬಾಗಿಲು ಮುರಿದಿರುವ ಕಳ್ಳರು, ಹುಂಡಿಯಲ್ಲಿನ ಕಾಣಿಕೆ ಹಣ ಕದಿಯಲು ಯತ್ನಿಸಿರುವುದು ಶುಕ್ರವಾರ ಬೆಳಗ್ಗೆ ಅರ್ಚಕರು ದೇವಾಲಯಕ್ಕೆ ತೆರಳಿದಾಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮನೆಯ ಕೋಣೆಯಲ್ಲೇ ನೇತಾಡುತ್ತಿತ್ತು ಪತ್ನಿಯ ಶವ; ಪತಿಯ ವಿರುದ್ಧ ಆರೋಪ

ಗುರುವಾರವಷ್ಟೇ ಖಾಲಿಯಾಗಿತ್ತು: ಗುರುವಾರವಷ್ಟೇ ದೇವಾಲಯದ ಅರ್ಚಕರು ಬದಲಾದ ಹಿನ್ನೆಲೆಯಲ್ಲಿ ಹುಂಡಿಯಲ್ಲಿನ ಕಾಣಿಕೆ ಹಣವನ್ನು ಎಣಿಸಿ, ಹುಂಡಿ ಖಾಲಿ ಮಾಡಲಾಗಿತ್ತು. ಇತ್ತ ಕಡೆ ಕಾಣಿಕೆ ಹುಂಡಿ ಆಸೆಗೆ ರಾತ್ರಿ ದೇಗುಲಕ್ಕೆ ಕನ್ನ ಹಾಕಿದ್ದ ಖದೀಮರು ಹುಂಡಿ ಬೀಗ ಮುರಿದು ಹಣ ದೋಚಲು ಯತ್ನಿಸಿದ್ದಾರೆ. ಆದರೆ ಖಾಲಿ ಹುಂಡಿ ಕಂಡು ಬೇಸ್ತು ಬಿದ್ದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಮಳೆ ಸಾಧ್ಯತೆ

ಮುಂದುವರಿದ ಕಳವು: ಕಳೆದ ಆರೇಳು ತಿಂಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಹಲವು ಕಡೆಗಳಲ್ಲಿ ಸರಣಿಯಾಗಿ ದೇಗುಲಗಳಲ್ಲಿ ಕಳ್ಳತನ ಪ್ರಕರಣ ನಡೆದಿವೆ. ಇತ್ತೀಚಿಗೆ ದೊಡ್ಡಬೆಳವಂಗಳ ಠಾಣೆ ಪೊಲೀಸರು ಹುಂಡಿ ಚೋರನೊಬ್ಬನನ್ನು ಬಂಧಿಸಿದ್ದರು. ತನಿಖೆಯಲ್ಲಿ ತಾಲೂಕಿನ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದ. ಈತನೊಂದಿಗೆ ಇನ್ನಿಬ್ಬರು ಸಹಚರರಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಕೆಲವು ದಿನಗಳಿಂದ ತಣ್ಣಗಿದ್ದ ಕಳವು ಪ್ರಕರಣ ಮತ್ತೆ ಮರುಕಳಿಸಿದೆ.

ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

Share This Article

ಜಿಮ್​ಗೆ ಹೋಗದೇ, ಹಸಿವಿನಿಂದ ಬಳಲದೇ ಸುಲಭವಾಗಿ 18 ಕೆಜಿ ತೂಕ ಇಳಿಸಿದ ಯುವತಿ! ಹೇಗೆ ಗೊತ್ತಾ? Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…

ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis

Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…