More

    ಟ್ವಿಟರ್‌ಗೆ ಅಂತ್ಯ ಹಾಡಿ, ಸ್ವಂತ ಜಾಲತಾಣ ಶುರು ಮಾಡಿ … ಸರ್ಕಾರಕ್ಕೆ ಕಂಗನಾ ಮನವಿ

    ಕಂಗನಾ ರಣಾವತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ವಿವಾದಾತ್ಮಕ ಹೇಳಿಕೆಗಳಿಗೆ ಬಹಳ ಫೇಮಸ್ಸು. ಚಿತ್ರರಂಗವಾಗಲೀ, ಬೇರೆ ವಿಷಯವಾಗಲೀ ಯಾವುದನ್ನೂ ಲೆಕ್ಕಿಸದೇ ತಮ್ಮ ಅಭಿಪ್ರಾಯ ಹೇಳುವ ರಂಗೋಲಿ ಅವರನ್ನು ಅದೇ ಕಾರಣಕ್ಕೆ ಟ್ವಿಟರ್ ಬ್ಯಾನ್ ಮಾಡಿತ್ತು. ಹಾಗೆ ಬ್ಯಾನ್ ಆದ ರಂಗೋಲಿ ಬೆನ್ನಿಗೆ ಇದೀಗ ಕಂಗನಾ ನಿಂತಿದ್ದಾರೆ. ತಮ್ಮ ಸಹೋದರಿಯ ಪರವಾಗಿ ಮಾತನಾಡಿರುವ ಅವರು, ಭಾರತದಿಂದ ಟ್ವಿಟರ್‌ಗೆ ಗೇಟ್‌ಪಾಸ್ ನಿಡಬೇಕೆಂದು ಹೇಳಿದ್ದಾರೆ.

    ಮುರಾದಾಬಾದ್‌ನಲ್ಲಿನ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್. ಈ ಕುರಿತು ಹಲವರು ಅವರ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ರಂಗೋಲಿ ಅವರ ಅಕೌಂಟ್ ಸ್ಥಗಿತಗೊಳಿಸಿತ್ತು ಟ್ವಿಟರ್. ಇದರಿಂದ ಸಿಟ್ಟಾಗಿದ್ದ ರಂಗೋಲಿ, ‘ಟ್ವಿಟರ್ ಇಲ್ಲದಿದ್ದರೆ ಏನಂತೆ, ತಮ್ಮ ವಾಕ್‌ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದಿಲ್ಲದಿದ್ದರೆ, ಬೇರೆ ಮಾಧ್ಯಮದ ಮೂಲಕ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇನೆ’ ಎಂದು ರಂಗೋಲಿ, ಶುಕ್ರವಾರವಷ್ಟೇ ಹೇಳಿದ್ದರು.

    ಇದೀಗ ಅಕ್ಕನ ಪರವಾಗಿ ಬ್ಯಾಟ್ ಬೀಸಿರುವ ಕಂಗನಾ, ‘ಭಾರತದಲ್ಲಿ ಟ್ವಿಟರ್‌ಗೆ ಗೇಟ್‌ಪಾಸ್ ನೀಡಿ, ಸರ್ಕಾರ ತನ್ನದೇ ಆದ ಸ್ವಂತ ಹೊಸ ಜಾಲತಾಣವನ್ನು ತೆರೆದರೆ ಒಳ್ಳೆಯದು. ಆ ಮೂಲಕ ನಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬಹುದು’ ಎಂದು ಹೇಳಿದ್ದಾರೆ.

    ಸಹೋದರಿ ರಂಗೋಲಿ ಅವರನ್ನು ಸಮರ್ಥಿಸಿಕೊಂಡ ಕಂಗನಾ, ‘ರಂಗೋಲಿ ಯಾವುದೇ ತಪ್ಪು ಮಾಡಿಲ್ಲ. ವೈದ್ಯರು ಮತ್ತು ನರ್ಸ್‌ಗಳ ಮೇಲೆ ಹಲ್ಲೆ ಮಾಡಿರುವವರನ್ನು ಗುಂಡಿಕ್ಕಿ ಎಂದು ಹೇಳಿದ್ದಾರೆಯೇ ಹೊರತು, ಯಾವುದೇ ಸಮುದಾಯದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ’ ಎಂದು ಹೇಳಿದ್ದಾರೆ.

    ಕೊನೆಗೂ ನಾವಿಬ್ಬರು ಪ್ರೇಮಪಕ್ಷಿಗಳೆಂದು ಹೇಳಿಕೊಂಡ ಕ್ರಿಕೆಟಿಗ ಕೆ.ಎಲ್​ ರಾಹುಲ್​- ನಟಿ ಆಥಿಯಾ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts