More

    ಚಿತ್ರಪ್ರದರ್ಶನ ಪ್ರಾರಂಭಿಸಿ … ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಕಂಗನಾ ಮನವಿ

    ಮುಂಬೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನವನ್ನಾಧರಿಸಿದ ‘ತಲೈವಿ’ ಚಿತ್ರವು ಸೆಪ್ಟೆಂಬರ್​ 10ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಆದರೆ, ಲಾಕ್​ಡೌನ್​ನಿಂದ ಮಹಾರಾಷ್ಟ್ರದಲ್ಲಿ ಇನ್ನೂ ಚಿತ್ರಮಂದಿರಗಳು ತೆರೆದಿಲ್ಲ, ಚಿತ್ರಪ್ರದರ್ಶನ ಪ್ರಾರಂಭವಾಗಿಲ್ಲ. ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನವನ್ನು ಪ್ರಾರಂಭಿಸುವಂತೆ ಕಂಗನಾ ರಣಾವತ್​ ಮನವಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ರಾಮ್ ಚರಣ್​ ಬೇಡ ಅಂದಿದ್ರೂ ಸಮಂತಾ ಲಿಪ್​ಲಾಕ್: ರಂಗಸ್ಥಳಂ ಚಿತ್ರದ ಹಿಂದಿನ ಸೀಕ್ರೆಟ್​ ಬಿಚ್ಚಿಟ್ಟ ನಿರ್ದೇಶಕ!

    ದೇಶದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ಸಹ ಕಳೆದ ಮಾರ್ಚ್​​ನಲ್ಲಿ ಲಾಕ್​ಡೌನ್​ ಘೋಷಿಸಿತ್ತು. ಕ್ರಮೇಣ, ಬೇರೆ ರಾಜ್ಯಗಳಲ್ಲಿ ಲಾಕ್​ಡೌನ್​ ತೆರವಾದರೂ, ಮಹಾರಾಷ್ಟ್ರದಲ್ಲಿ ಮಾತ್ರ ಇನ್ನೂ ತೆರವಾಗಿಲ್ಲ. ಕಳೆದ ತಿಂಗಳ 19ರಂದು ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಚಿತ್ರವು ದೇಶಾದ್ಯಂತ ಬಿಡುಗಡೆಯಾಯಿತು. ಮಹಾರಾಷ್ಟ್ರದಲ್ಲಿ ಚಿತ್ರಪ್ರದರ್ಶನಕ್ಕೆ ಅನುಮತಿ ಸಿಗಬಹದು ಎಂಬ ನಂಬಿಕೆಯಿಂದಲೇ ಚಿತ್ರಬಿಡುಗಡೆಯನ್ನು ಆಗಸ್ಟ್​​ 19ಕ್ಕೆ ಘೋಷಿಸಲಾಗಿತ್ತು. ಆದರೆ, ಕರೊನಾ ಭಯದಿಂದ ಸರ್ಕಾರ ಚಿತ್ರಪ್ರದರ್ಶನವನ್ನು ಪ್ರಾರಂಭಿಸಲೇ ಇಲ್ಲ. ಅದೇ ಕಾರಣಕ್ಕೆ, ದೇಶದ ಬೇರೆಬೇರೆ ರಾಜ್ಯಗಳಲ್ಲಿ ‘ಬೆಲ್​ ಬಾಟಂ’ ಚಿತ್ರವು ಬಿಡುಗಡೆಯಾದರೂ, ಮಹಾರಾಷ್ಟ್ರದಲ್ಲಿ ಮಾತ್ರ ಬಿಡುಗಡೆಯಾಗಲಿಲ್ಲ.

    ಈಗ ಇದೇ ಸೆಪ್ಟೆಂಬರ್​ 10ರಂದು ‘ತಲೈವಿ’ ಬಿಡುಗಡೆಯಾಗಲಿದೆ. ಈಗಲಾದರೂ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗಬಹುದು ಮತ್ತು ಚಿತ್ರ ಬಿಡುಗಡೆಯಾಗಬಹುದು ಎಂಬ ಚಿತ್ರತಂಡದ ನಿರೀಕ್ಷೆ ಸುಳ್ಳಾಗುತ್ತಿದೆ. ಬಿಡುಗಡೆಗೆ ಇನ್ನು ಎರಡೇ ದಿನಗಳಿದ್ದರೂ ಸರ್ಕಾರ ಮಾತ್ರ ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿಲ್ಲ. ಈ ಸಂಬಂಧ, ಕಂಗನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಚಿತ್ರರಂಗ ಮತ್ತು ಚಿತ್ರಮಂದಿರಗಳನ್ನು ಉಳಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಲಂಕೆ; ಚಿತ್ರಮಂದಿರಗಳಲ್ಲಿ ಸ್ಟಾರ್ ಕಲರವ…

    ‘ಮಹಾರಾಷ್ಟ್ರದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ, ಚಿತ್ರಪ್ರದರ್ಶನವನ್ನು ಪುನಃ ಪ್ರಾರಂಭಿಸುವ ಮೂಲಕ ಚಿತ್ರರಂಗ ಮತ್ತು ಚಿತ್ರಮಂದಿರಗಳನ್ನು ಉಳಿಸಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಮನವಿ ಸಲ್ಲಿಸದ್ದಾರೆ ಕಂಗನಾ. ಆದರೆ, ಕಳೆದ ವರ್ಷ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಕಂಗನಾ ಮನವಿಗೆ ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಲ್ಯಾಗ್​ ಮಂಜು-ದಿವ್ಯಾ ಸುರೇಶ್​ ಬಗ್ಗೆ ಹರಿದಾಡ್ತಿರೋ ಸುದ್ದಿ ನಿಜನಾ? ಹೌದು ಅನ್ನುವಂತಿದೆ ಈ ವೈರಲ್​ ಫೋಟೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts