ನಿರ್ಮಾಪಕ ಕರಣ್ ಜೋಹರ್ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಡುವೆ ‘ದೋಸ್ತಾನಾ 2’ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದ ಹೊಗೆಯಾಡಿತ್ತು. ಅದ್ಯಾವ ಮಟ್ಟಿಗೆ ಅಂದರೆ, ‘ಕಾರ್ತಿಕ್ ಆರ್ಯನ್ ಜತೆಗೆ ನಾನು ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ’ ಎಂದು ಸ್ವತಃ ಕರಣ್ ಎರಡು ದಿನದ ಹಿಂದಷ್ಟೇ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಈಗ ಇದೇ ವಿಚಾರವನ್ನು ಕಂಗನಾ ಕೆದಕಿದ್ದಾರೆ. ಅಷ್ಟೇ ಅಲ್ಲ ಕರಣ್ಗೆ ಟ್ವಿಟರ್ನಲ್ಲಿ ತರಾಟೆಯನ್ನೂ ತೆಗೆದುಕೊಂಡಿದ್ದಾರೆ.
‘ಕಾರ್ತಿಕ್ ಈವರೆಗೂ ಏನಾಗಿದ್ದಾನೋ ಅದರಲ್ಲಿ ಅವನ ಪರಿಶ್ರಮವಿದೆ. ಹಾಗಾಗಿ ನಾನು ಈ ಮೂಲಕ ಜೋಹರ್ಗೆ ಮತ್ತು ಆತನ ನೆಪೋಟಿಸಂ ಗ್ಯಾಂಗ್ ಕ್ಲಬ್ಗೆ ಹೇಳುವುದೇನೆಂದರೆ, ನೀವು ಮೊದಲೇ ರಣಹದ್ದುಗಳು, ಅವನನ್ನೂ ಸುಶಾಂತ್ ರೀತಿ ನೇಣು ಹಾಕಿಕೊಳ್ಳುವಂತೆ ಪ್ರಚೋದಿಸಬೇಡಿ. ದಯವಿಟ್ಟು ಆತನನ್ನು ಅವನ ಪಾಡಿಗೆ ಬಿಟ್ಟುಬಿಡಿ’ ಎಂದು ಕರಣ್ಗೆ ಚಳಿ ಬಿಡಿಸಿದ್ದಾರೆ. -ಏಜೆನ್ಸೀಸ್
ಮಾಟ-ಮಂತ್ರಕ್ಕಾಗಿ 13 ವರ್ಷದ ಮಗಳನ್ನೇ ಬಲಿಕೊಟ್ಟಿದ್ದ; ಕೊನೆಗೂ ಸಿಕ್ಕಿಬಿದ್ದ…