More

    ಕಣಕುಂಬಿ ಅರಣ್ಯದಲ್ಲಿ 8 ಸೆಂ.ಮೀ. ಮಳೆ

    ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯದಲ್ಲಿ ಸೋಮವಾರ ಒಂದೇ ರಾತ್ರಿ 8 ಸೆಂ.ಮೀ. ಮಳೆಯಾಗಿದೆ. ಕಳೆದ ಎರಡು ವಾರಗಳಿಂದ ಮಾಯವಾಗಿದ್ದ ಮಳೆ ಸೋಮವಾರ ಮುಸ್ಸಂಜೆ ಬಳಿಕ ಸುರಿಯಲಾರಂಭಿಸಿದ್ದು, ವರುಣನ ಪುನರಾಗಮನದಿಂದ ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ.

    ಕಂದಾಯ ಇಲಾಖೆ ಮೂಲಗಳ ಪ್ರಕಾರ ಜಾಂಬೋಟಿಯಲ್ಲಿ 1.8 ಸೆಂ.ಮೀ., ನಾಗರಗಾಳಿ ಮತ್ತು ಅಸೋಗಾದಲ್ಲಿ 0.8 ಸೆಂ.ಮೀ., ಲೋಂಡಾದಲ್ಲಿ 0.6 ಸೆಂ.ಮೀ., ಪಟ್ಟಣದಲ್ಲಿ 0.4 ಸೆಂ.ಮೀ. ಮಳೆ ಸುರಿದಿದೆ. ಮಂಗಳವಾರ ಇಡೀ ದಿನ ಪಟ್ಟಣ ಸೇರಿ ತಾಲೂಕಿನಾದ್ಯಂತ ಮೋಡ ಮುಸುಕಿದ ವಾತಾವರಣವಿತ್ತು. ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರವೂ ಉತ್ತಮ ಮಳೆ ಸುರಿದಿದೆ.

    ಬೆಳಗಾವಿಯಲ್ಲೂ ಮಳೆ: ಬೆಳಗಾವಿ ನಗರದಲ್ಲೂ ಮಧ್ಯಾಹ್ನ ಕೆಲಹೊತ್ತು ಮಳೆ ಸುರಿಯಿತು. ವಾರದಿಂದ ಮಳೆಯಿಲ್ಲದ್ದರಿಂದ ಜನರಿಗೆ ಮತ್ತೆ ಬೇಸಿಗೆಯ ಅನುಭವ ಉಂಟಾಗಿತ್ತು. ಮಂಗಳವಾರ ಸುರಿದ ಮಳೆಯಿಂದ ಹಾಗೂ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದ ಕಾರಣ ಸೆಖೆ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts