More

    ಶಾಸಕ ಬಸವರಾಜ ದಢೇಸುಗೂರು ಬಂಧಿಸಿ: ಕನಕಗಿರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಪ್ರತಿಭಟನೆ

    ಕನಕಗಿರಿ: ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿ ಶಾಸಕ ಬಸವರಾಜ ದಢೇಸುಗೂರು 15 ಲಕ್ಷ ರೂ. ಪಡೆದ ಆಡಿಯೋ ವೈರಲ್ ಆಗಿದ್ದು, ಕೂಡಲೇ ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಘಟಕದ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರದಿಂದ ಈಗಾಗಲೇ ಹಲವರು ಬಂಧಿತರಾಗಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ಆಡಳಿತ ಪಕ್ಷದ ಶಾಸಕರೇ, ಕುಷ್ಟಗಿ ತಾಲೂಕು ಶಿರುಗುಪ್ಪಿ ಮೂಲದ ನಿವಾಸಿ ಪರಸಪ್ಪ ಎಂಬುವರ ಮಗನಿಗೆ ಪಿಎಸ್‌ಐ ಹುದ್ದೆ ಕೊಡಿಸಲು 15 ಲಕ್ಷ ರೂ. ಪಡೆದಿದ್ದು, ಹುದ್ದೆ ದೊರೆಯದಿದ್ದಾಗ ಹಣ ಮರಳಿ ನೀಡಲು ಕೇಳಿದರೆ ಶಾಸಕರು ಸತಾಯಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವೈರಲ್ ಆದ ಆಡಿಯೋದಲ್ಲಿ ಶಾಸಕ ದಢೇಸುಗೂರು, ಸರ್ಕಾರಕ್ಕೆ ಹಣ ನೀಡಿರುವುದಾಗಿ ಹೇಳಿದ್ದಾರೆ. ಇನ್ನೊಂದು ಆಡಿಯೋದಲ್ಲಿ ಪರಸಪ್ಪಗೆ ಬೆದರಿಕೆ ಹಾಕಲಾಗಿದೆ. ಇದರಿಂದ ಪಿಎಸ್‌ಐ ಅಕ್ರಮದ ನಂಟು ಕ್ಷೇತ್ರಕ್ಕೂ ತಲುಪಿದೆ. ಕಾರಣ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

    ನಂತರ ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಮೂಲಕ ರಾಜ್ಯಪಾಲಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಶರಣಪ್ಪ ಭತ್ತದ್, ಅನಿಲ್ ಬಿಜ್ಜಳ, ಸಿದ್ದನಗೌಡ ನವಲಿ, ರವಿ ಪಾಟೀಲ್, ಟಿ.ಜೆ ರಾಮಚಂದ್ರ, ಕಂಠಿರಂಗಪ್ಪ, ಭೀಮನಗೌಡ, ಹೊನ್ನೂರಸಾಬ್ ಉಪ್ಪು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts