More

    ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾನಸಿಕ ನೆಮ್ಮದಿ, ಉಪನ್ಯಾಸಕ ಪಂಪಾರೆಡ್ಡಿ ಮಾದಿನಾಳ ಹೇಳಿಕೆ

    ಕನಕಗಿರಿ: ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಕೆಪಿಎಸ್ ಪಿಯು ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಪಂಪಾರೆಡ್ಡಿ ಮಾದಿನಾಳ ಹೇಳಿದರು.
    ಪಟ್ಟಣದ ಚನ್ನಶ್ರಿರುದ್ರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನಕಗಿರಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನಮ್ಮ ಪೂರ್ವಜರು ಕೃಷಿ ಚಟುವಟಿಕೆ ನಂತರದ ಬಿಡುವಿನ ವೇಳೆ ಮನರಂಜನೆಗಾಗಿ ನಾನಾ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಆಯಾ ಪ್ರದೇಶಗಳಲ್ಲಿ ಅಲ್ಲಿನ ಪ್ರಸಿದ್ಧ ಕಲೆಗಳು ಅನಾವರಣಗೊಳ್ಳುತ್ತಿದ್ದವು. ಅದರಂತೆ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಲು ಶಾಲಾ ಕಾಲೇಜುಗಳ ಹಂತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ವಿದ್ಯಾರ್ಥಿಗಳು ಭಾಗವಹಿಸುವುದಕ್ಕೆ ಹಿಂಜರಿಯಬಾರದು ಎಂದು ಹೇಳಿದರು.
    ಕಾಲೇಜಿನ ಪ್ರಾಚಾರ್ಯ ಪ್ರಕಾಶ ಬೇವಿನಮರದ, ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ ಮಾತನಾಡಿದರು. ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ, ಇಂಗ್ಲಿಷ್ ಪ್ರಬಂಧ, ಭಾವಗೀತೆ, ಜಾನಪದ, ಇಂಗ್ಲಿಷ್ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಚಿತ್ರಕಲೆ, ವಿಜ್ಞಾನ ಉಪನ್ಯಾಸ, ಏಕನಾಭಿನಯ ಇತರ ಕಾರ್ಯಕ್ರಮಗಳು ನಡೆದವು.
    ಉಪನ್ಯಾಸಕರಾದ ಹನುಮಂತಪ್ಪ ತಿದಿ, ದಶರಥ, ಇಮಾಮ್‌ಹುಸೇನ, ಶಿಕ್ಷಕ ಶಿವರೆಡ್ಡಿ ಮಣ್ಣೂರು, ಮೌನೇಶ ಬಡಿಗೇರ, ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts