More

    ಕನಕಗಿರಿಯಲ್ಲಿ ಕೋರ್ಟ್ ಆರಂಭಿಸಲು ಕಟ್ಟಡ ಪರಿಶೀಲಿಸಿ ಜಿಲ್ಲಾ ನ್ಯಾಯಾಧೀಶೆ

    ಕನಕಗಿರಿ: ತಾಲೂಕು ಕೇಂದ್ರವಾಗಿರುವ ಪಟ್ಟಣದಲ್ಲಿ ಕೋರ್ಟ್ ಆರಂಭಕ್ಕಾಗಿ ಇಲ್ಲಿನ ಶ್ರೀ ಕನಕಾಚಲಪತಿ ದೇವಸ್ಥಾನದ ಯಾತ್ರಿ ನಿವಾಸದ ನೆಲ ಮಹಡಿಯಲ್ಲಿನ ಹಾಲ್‌ಗಳನ್ನು ಜಿಲ್ಲಾ ಮುಖ್ಯ ನ್ಯಾಯಾಧೀಶೆ ಬಿ.ಎಸ್. ರೇಖಾ ನೇತೃತ್ವದ ನ್ಯಾಯಾಧೀಶರ ತಂಡ ಬುಧವಾರ ಪರಿಶೀಲಿಸಿತು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ನ್ಯಾಯಾಧೀಶರು, ತಾಲೂಕು ಕೇಂದ್ರದಲ್ಲಿ ವಾರಕ್ಕೆ ಮೂರು ದಿನ ಕೋರ್ಟ್ ನಡೆಸುವಂತೆ ಸರ್ಕಾರದ ಆದೇಶವಿದ್ದು, ಈ ಹಿನ್ನೆಲೆ ತ್ವರಿತವಾಗಿ ಕೋರ್ಟ್ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸುವ್ಯವಸ್ಥಿತವಾಗಿ ಕೋರ್ಟ್ ನಡೆಸಲುಬೇಕಾದ ಹಾಲ್, ಚೇಂಬರ್, ಪ್ರತ್ಯೇಕ ಶೌಚಗೃಹ ಸೇರಿ ಮೂಲ ಸೌಲಭ್ಯ ಪೂರ್ಣಗೊಳಿಸಿ ನ್ಯಾಯಾಲಯ ಕಾರ್ಯಾರಂಭ ಮಾಡುವುದು ಸೂಕ್ತ ಎಂದರು. ಐತಿಹಾಸಿಕ ಪ್ರಸಿದ್ಧ ಶ್ರೀ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇವಸ್ಥಾನ ಸಮಿತಿಯಿಂದ ನ್ಯಾಯಾಧೀಶರಿಗೆ ಗೌರವಿಸಲಾಯಿತು.

    ಕಂದಾಯ ನಿರೀಕ್ಷಕರಾದ ಬಸ್ರುದ್ದೀನ್, ಹಾಲೇಶ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಪ್ರಮುಖರಾದ ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ಸಣ್ಣ ಕನಕಪ್ಪ, ಪ್ರಕಾಶ ಹಾದಿಮನಿ, ಪಿಎಸ್‌ಐ ನಾಗಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts