More

    ಬಸರಿಹಾಳದಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆ: ಕೊಂಚ ನಿರಾಳರಾದ ಸುತ್ತಿಲಿನ ರೈತರು

    ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದ ಗುಡ್ಡದ ಪ್ರದೇಶದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬುಧವಾರ ತಡರಾತ್ರಿ ಹೆಣ್ಣು ಚಿರತೆ ಬಿದ್ದಿದೆ. ಬುಧವಾರ ರಾತ್ರಿ 9.30 ಸುಮಾರಿಗೆ ಚಿರತೆ ಬೋನಿಗೆ ಬಿದ್ದಿರುವುದನ್ನು ಸುತ್ತಲಿನ ರೈತರು ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಚಿರತೆ ಮೂರರಿಂದ ನಾಲ್ಕು ವರ್ಷ ಪ್ರಾಯದ್ದಾಗಿದ್ದು, ಅರಣ್ಯಕ್ಕೆ ರವಾನಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಕಳೆದೊಂದು ತಿಂಗಳಿನಿಂದ ಬಸರಿಹಾಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಕಾಣಿಸಿಕೊಂಡಿದ್ದರಿಂದ ಸೆರೆಗೆ ರೈತರು ಮನವಿ ಸಲ್ಲಿಸಿದ್ದರು. ಜ.27ರಂದು ಅರಣ್ಯ ಇಲಾಖೆ ಸಿಬ್ಬಂದಿ, ಬೋನು ಇರಿಸಿದ್ದರು. ಅಲ್ಲದೆ ಗಸ್ತು ತಿರುಗಿದ್ದರು. ಇನ್ನೂ ಚಿರತೆಗಳಿದ್ದು, ಮತ್ತೆ ಬೋನು ಇರಿಸುವಂತೆ ಜನ ಆಗ್ರಹಿಸಿದ್ದಾರೆ.

    ಎಸ್ಪಿ ಬರೋವರೆಗೂ ಒಯ್ಯಬೇಡಿ
    ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ರವಾನಿಸಲು ಆಗಮಿಸಿದ್ದ ಇಲಾಖೆ ಸಿಬ್ಬಂದಿಗೆ ಕೆಲ ಸ್ಥಳೀಯರು ಎಸ್ಪಿ ಬರುವವರೆಗೂ ಚಿರತೆ ಒಯ್ಯಲು ಬಿಡುವುದಿಲ್ಲ. ಕಾಡುಪ್ರಾಣಿಗಳ ಭಯದಿಂದ ನಾವು ಜೀವಿಸುತ್ತಿದ್ದು, ನಮಗೆ ಬಂದೂಕು ಲೈಸೆನ್ಸ್ ಕೇಳಿದರೆ ನೀಡುತ್ತಿಲ್ಲ. ಅದಕ್ಕಾಗಿ ಎಸ್ಪಿಯವರೇ ಬರಬೇಕು. ಅಲ್ಲಿಯವರೆಗೂ ಒಯ್ಯಬೇಡಿ ಎಂದು ಪಟ್ಟುಹಿಡಿದು ಕುಳಿತಿದ್ದರು. ಸ್ಥಳಕ್ಕೆ ಪಿಎಸ್‌ಐ ತಾರಾಬಾಯಿ ಆಗಮಿಸಿ ಎಸ್ಪಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಗ್ರಾಮಸ್ಥರ ಮನವೊಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts