More

    ಹೊಸಹಟ್ಟಿಯಲ್ಲಿ ಬೆರಗು ಮೂಡಿಸಿದ ಕೆಂಡಾರಾಧನೆ: ಭಕ್ತರ ಮೇಲೆ ಬೆಂಕಿ ಉಂಡೆಗಳ ತೂರಿದರೂ ಗಾಯದ ಕಲೆ ಇಲ್ಲ

    ಕಾನಹೊಸಹಳ್ಳಿ: ಇಡೀ ಊರು ಕತ್ತಲುಮಯ, ಗಂಗೆಪೂಜೆ ಮುಗಿಸಿ ಬಂದ 30 ಭಕ್ತರ ಗುಂಪು ಬರಿಗೈಲಿ ಕೆಂಡ ಹಿಡಿದು ಬಾನೆತ್ತರಕ್ಕೆ ತೂರಿದಾಗ ಮೂಡಿದ ಚಿತ್ತಾರ, ಸುತ್ತಲೂ ನೆರೆದಿದ್ದ ಜನರ ಮೇಲೆ ಬೆಂಕಿ ಉಂಡೆ ಬಿದ್ದರೂ ಗಾಯದ ಗುರುತಿಲ್ಲ..

    ಇದು ಸಮೀಪದ ಹೊಸಹಟ್ಟಿ ಗ್ರಾಮದಲ್ಲಿ ಭಾನುವಾರ ರಾತ್ರಿ ಕಂಡು ಬಂದ ಚಿತ್ರಣ. ಪ್ರತಿ ಮೂರು ವರ್ಷಕ್ಕೊಮ್ಮೆ ಗುಗ್ಗರಿ ಹಬ್ಬದ ನಿಮಿತ್ತ ಆರಾಧ್ಯದೈವ ಶ್ರೀ ಬಗ್ಗುಲು ಓಬಳೇಶ್ವರಸ್ವಾಮಿ ಜಾತ್ರೆಯಲ್ಲಿ ನಡೆಯುವ ಕೆಂಡಾರಾಧನೆ ವಿಶಿಷ್ಠ ಆಚರಣೆ, ಸಹಸ್ರಾರು ಭಕ್ತರ ಮೈಮನ ರೋಮಾಂಚನಗೊಳಿಸಿತು.

    ಭಾನುವಾರ ರಾತ್ರಿ 11 ಗಂಟೆಗೆ 30 ಭಕ್ತರ ಗುಂಪು ಗಂಗೆಪೂಜೆಗೆ ತೆರಳಿತು. ಅದಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಕಾಡಿನಿಂದ ಐದಾರು ಎತ್ತಿನಗಾಡಿಯಲ್ಲಿ ತಂದ ಕಟ್ಟಿಗೆಯನ್ನು ಸುಟ್ಟು ಕೆಂಡವಾಗಿಸಿ ರಾಶಿ ಮಾಡಲಾಯಿತು. ಬಳಿಕ ಪೂಜಾರಿ ಪೂಜೆ ಮಾಡಿದರು. ಗಂಗೆಪೂಜೆಗೆ ಹೋಗಿ ಬಂದ ಭಕ್ತರ ಗುಂಪಿಗೆ ಸಹಸ್ರಾರು ಜನರು ಕೇಕೆ ಮತ್ತು ಹರ್ಷೊದ್ಗಾರದೊಂದಿಗೆ ಸ್ವಾಗತಿಸಿದರು. ಈ ವೇಳೆ 30 ಭಕ್ತರ ಗುಂಪು ಒಮ್ಮೆಲೆ ಕೆಂಡದರಾಶಿಗೆ ಮೂಗಿಬಿದ್ದು ವೀರಾವೇಷದಿಂದ ಬರಿಗೈಲಿ ಕೆಂಡ ಹಿಡಿದು ಭಕ್ತ ಸಮೂಹದ ಮೇಲೆ ತೂರಿದರು. ಆದರೆ ಬೆಂಕಿ ಉಂಡೆಗಳು ಭಕ್ತರ ಮೈಮೇಲೆ ಬಿದ್ದರೂ ಸುಡಲ್ಲಿಲ. ಬದಲಾಗಿ ಹಲವು ಬಗೆಯ ಚಿತ್ತಾರ ಮೂಡಿಸಿ ವಿಸ್ಮಯಕ್ಕೆ ಕಾರಣವಾಯಿತು.

    ಕೆಂಡಾರಾಧನೆ ಕಣ್ತುಂಬಿಕೊಳ್ಳಲು ಭೀಮಸಮುದ್ರ, ಹುಲಿಕುಂಟೆ, ಮಡಕಲಕಟ್ಟೆ, ಕುರಿಹಟ್ಟಿ, ಕರಡಿಹಳ್ಳಿ, ಹುರುಳಿಹಾಳ್, ಅರ್ಜುನಚಿನ್ನಹಳ್ಳಿ, ಓಬಳಶೆಟ್ಟಿಹಳ್ಳಿ, ಗುಂಡಮುಣುಗು ಹಾಗೂ ಸುತ್ತಲಿನ ಹತ್ತಾರು ಹಳ್ಳಿ ಜನರು ಮತ್ತು ಜಿಲ್ಲೆ, ರಾಜ್ಯ ಮತ್ತು ಹೊರ ರಾಜ್ಯದಿಂದಲೂ ನೂರಾರು ಭಕ್ತರು ಅಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts