More

    ಸದನದಲ್ಲಿ ಸಕ್ಕರೆ ಕಾರ್ಖಾನೆ ಜಮೀನು ಕುರಿತು ಚರ್ಚಿಸಿದ ಶಾಸಕ ಗಣೇಶ್

    ಕಂಪ್ಲಿ: 2583ನೇ ಚುಕ್ಕೆ ಗುರುತಿನ ಪ್ರಶ್ನೆಯನ್ನಾಗಿ ಕಂಪ್ಲಿ ಸಕ್ಕರೆ ಕಾರ್ಖಾನೆಯ 176ಎಕರೆ ಜಮೀನು ವಿಚಾರವಾಗಿ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವರಿಗೆ ಸದನದಲ್ಲಿ ಶಾಸಕ ಜೆ.ಎನ್.ಗಣೇಶ್ ಶುಕ್ರವಾರ ಪ್ರಶ್ನೆ ಮಾಡಿದ್ದಾರೆ. ಇದು ಮೂರನೇ ಬಾರಿ ಪ್ರಶ್ನಿಸಲಾಗುತ್ತಿದೆ. ಕಳೆದ ಬಾರಿ ಅರ್ಧಗಂಟೆ ಕಾಲಾವಕಾಶ ಕೊಡವುದಾಗಿ ಹೇಳಿ ಕೊಟ್ಟಿಲ್ಲ. 300ಕೋಟಿ ರೂಪಾಯಿಗಳ ಆಸ್ತಿಯನ್ನು ಕೇವಲ ಐದೂವರೆ ಕೋಟಿ ರೂಪಾಯಿಗಳಿಗೆ ಅಗ್ರಿಮೆಂಟ್ ಮೇಲೆ ಸರ್ಕಾರ ಅಬ್ದುಲ್ ಅಜೀಜ್ ಎನ್ನುವವರಿಗೆ ಕೊಟ್ಟಿದ್ದು, ಅಗತ್ಯ ದಾಖಲೆಗಳಿದ್ದು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೋರಿದರು.

    ಇದಕ್ಕೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರಿಸಿ, ಸದ್ಯ ಕೋರ್ಟ್ ಸ್ಟೇ ಕೊಟ್ಟಿದೆ. ಹುಷಾರಾಗಿ ಉತ್ತರ ನೀಡಬೇಕಿದೆ. ನೀವು ಸೋಮವಾರ ಬಂದಲ್ಲಿ ಎಜಿಯವರನ್ನು ಕರೆಯಿಸಿ ಕುಳಿತುಕೊಂಡು ಮಾತಾಡಿ ಚರ್ಚೆ ಮಾಡಬಹುದು ಎಂದಾಗ, ಜವಳಿ ಮತ್ತು ಕೈಮಗ್ಗ ಸಚಿವ ಶಂಕರ್ ಬಿ.ಪಾಟೀಲ್ ನೀವು ಇರ‌್ರಿ ಎಂದು ಸಭಾಧ್ಯಕ್ಷರು ಸೂಚನೆ ನೀಡಿದರು. ಆಗ ಶಂಕರ್ ಪಾಟೀಲರು ಉತ್ತರಿಸಿ, ನಮ್ಮ ಇಲಾಖೆಯಿಂದ ನಮ್ಮ ವ್ಯಾಪ್ತಿಗೆ ಬರುವ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಕಾನೂನು ನಿಯಮದ ಪ್ರಕಾರ ಏನು ಮಾಡಬೇಕು ಎಂದು ಚರ್ಚಿಸಲು ಗಣೇಶ್ ಬಂದು ಮಾತಾಡಿದರೆ ಒಳ್ಳೆಯದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts