More

    ರಸ್ತೆ ಕಾಮಗಾರಿ ಆರಂಭಿಸಿ; ತಹಸೀಲ್ದಾರ್‌ಗೆ ಹಳೆ ನೆಲ್ಲೂಡಿ, ಕೊಟ್ಟಾಲ್ ಭಾಗದ ರೈತರ ಮನವಿ

    ಕಂಪ್ಲಿ: ತಾಲೂಕಿನ ಹಳೆ ನೆಲ್ಲೂಡಿಯಿಂದ ಕಂಪ್ಲಿ ವರೆಗೆ ರಸ್ತೆ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಹಳೆ ನೆಲ್ಲೂಡಿ, ಕೊಟ್ಟಾಲ್ ಭಾಗದ ರೈತ ಮುಖಂಡರು ತಹಸೀಲ್ದಾರ್ ಗೌಸಿಯಾ ಬೇಗಂಗೆ ಮಂಗಳವಾರ ಮನವಿ ಸಲ್ಲಿಸಿದರು.

    ರೈತ ಮುಖಂಡ ಡಿ.ರಮೇಶ್ ಮಾತನಾಡಿ, ಕಂಪ್ಲಿಯಿಂದ ಎಮ್ಮಿಗನೂರು ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಇದರಲ್ಲಿ ಎಮ್ಮಿಗನೂರಿನಿಂದ ಹಳೆ ನೆಲ್ಲೂಡಿ ವರೆಗೆ ಮಾತ್ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಮೂರು ತಿಂಗಳಾದರೂ ಹೆಳೆ ನೆಲ್ಲೂಡಿಯಿಂದ ಕಂಪ್ಲಿತನಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಈ ರಸ್ತೆ ಸಂಪೂರ್ಣ ತಗ್ಗು ಗುಂಡಿಗಳಿಂದ ಕೂಡಿದ್ದು, ಶಾಲಾ ಮಕ್ಕಳು, ವೃದ್ಧರು, ರೋಗಿಗಳು, ಗರ್ಭಿಣಿಯರ ಸಂಚಾರ ಅಪಾಯಕಾರಿಯಾಗಿದೆ. ರೈತರು ಫಸಲು, ಗೊಬ್ಬರ ಸಾಗಿಸಲು ಕಷ್ಟಕರವಾಗಿದೆ. ರಸ್ತೆಯಲ್ಲಿನ ಕುಣಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ.

    ಏಳು ದಿನದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸದಿದ್ದಲ್ಲಿ ಹಳೆ ನೆಲ್ಲೂಡಿ-ಕಂಪ್ಲಿ ರಸ್ತೆ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮನವಿ ಸಲ್ಲಿಕೆ ವೇಳೆ ಹಳೆ ನೆಲ್ಲೂಡಿ, ಕೊಟ್ಟಾಲ್ ಭಾಗದ ರೈತರಾದ ಪಿ.ನರಸಿಂಹ, ಎಸ್.ಹರಿಪ್ರಸಾದ್, ಎಂ.ರವಿಚಂದ್ರ, ಡಿ.ಸುಧೀರ್, ತೇಜು, ಜಿ.ಭಾಸ್ಕರ್, ಡಿ.ಶ್ರೀಕಾಂತ್, ಎಂ.ಹರಿ, ಕೆ.ಅಮಿತ್, ಕೆ.ಸುಧಾಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts