More

    ಕಂಪ್ಲಿ ತಾಲೂಕು ಕಚೇರಿಯಲ್ಲಿ ಕಾಯಕ ಶರಣರ ಜಯಂತಿ ಆಚರಣೆ

    ಕಂಪ್ಲಿ: ನಿತ್ಯ ಜೀವನದಲ್ಲಿ ಕಾಯಕ ತತ್ವ ಅಳವಡಿಸಿಕೊಂಡಲ್ಲಿ ವೈಯಕ್ತಿಕ ಮತ್ತು ಸಮುದಾಯದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪಟ್ಟಣದ ನಾಡಕಚೇರಿಯ ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಹೇಳಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿಯವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಯಕ ಶರಣರ ತತ್ವ ಸದಾ ಅನುಕರಣೀಯವಾಗಿದೆ. ಎಲ್ಲ ಕಾಯಕಗಳು ಶ್ರೇಷ್ಠವಾಗಿದ್ದು ಸಮಾನವಾಗಿವೆ. ಪ್ರತಿಯೊಬ್ಬರೂ ಕೌಶಲಾಧಾರಿತ ಕಾಯಕದಲ್ಲಿ ತೊಡಗಿಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್, ಶಿಕ್ಷಕರಾದ ಈರಪ್ಪ ಸೊರಟೂರ, ರಂಗಪ್ಪ ಕಟ್ಟಿಮನಿ, ಶರಣರ ಬಳಗದ ಪಾಮಯ್ಯ ಶರಣರು, ವೀರೇಶ್, ಹುಲುಗಪ್ಪ, ಹನುಮಂತಪ್ಪ, ಚನ್ನಬಸಪ್ಪ, ಮೂರ್ತೆಪ್ಪ, ಎಫ್‌ಡಿಸಿ ಮಾಲತೇಶ ದೇಶಪಾಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts