More

    ಸನಾತನ ಸಂಪ್ರದಾಯದಿಂದ ವಿಮುಖರಾಗದಿರಿ-ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳ ಕಿವಿಮಾತು

    ಕಂಪ್ಲಿ: ಆಧುನಿಕತೆಯ ನೆಪದಲ್ಲಿ ಸನಾತನ ಸಂಪ್ರದಾಯಗಳಿಂದ ಯಾರೂ ವಿಮುಖರಾಗಬಾರದು ಭಕ್ತ ಸಮೂಹಕ್ಕೆ ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳ ಕಿವಿಮಾತು ಹೇಳಿದರು.

    ಪಟ್ಟಣದ ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ವೈಕುಂಠ ಏಕಾದಶಿ ನಿಮಿತ್ತ ಶ್ರೀಮನ್ನಾರಾಯಣ ದೇವರನ್ನು ಪೂಜಿಸಿ, ಮಾತನಾಡಿದರು. ವೈಕುಂಠ ಏಕಾದಶಿಯಂದು ಉತ್ತರ ದ್ವಾರದಿಂದ ಶ್ರೀ ಮನ್ನಾರಾಯಣನ ದರ್ಶನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಏಕಾದಶಿ ವ್ರತದಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಉತ್ತರ ದ್ವಾರದ ಮೂಲಕ ವೆಂಕಟರಮಣನ ದರ್ಶನ ಪಡೆದರೆ ಸಪ್ತ ಜನ್ಮದ ಪಾಪಗಳು ನಾಶವಾಗುತ್ತವೆ ಎಂದರು.

    ವೈಕುಂಠ ಏಕಾದಶಿ ನಿಮಿತ್ತ ಶ್ರೀ ಮನ್ನಾರಾಯಣ ಪ್ರತಿಮೆಯನ್ನು ಫಲ-ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ-ಭಕ್ತಿಗಳಿಂದ ಜರುಗಿದವು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಸುಧಾ ನಾಗರಾಜ್, ಸೇವಾಕರ್ತರಾದ ಆಂಧ್ರ ಮೇಸ್ತ್ರಿ ವೆಂಕಟೇಶಲು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts