More

    ಅನ್ನದಲ್ಲಿ ಹುಳು, ಕಲ್ಲಿನ ಹರಳು -ಶಾಸಕ ಜೆ.ಎನ್.ಗಣೇಶ್ ಎದುರು ವಿದ್ಯಾರ್ಥಿಗಳ ಅಳಲು

    ಕಂಪ್ಲಿ: ವಸತಿ ನಿಲಯದ ಅನ್ನದಲ್ಲಿ ಹುಳು, ಕಲ್ಲಿನ ಹರಳು ಬರುತ್ತಿವೆ ಎನ್ನುವ ವಿದ್ಯಾರ್ಥಿಗಳ ದೂರಿನ ಮೇರೆಗೆ, ಶಾಸಕ ಜೆ.ಎನ್.ಗಣೇಶ್ ಬುಧವಾರ ರಾತ್ರಿ ಇಲ್ಲಿನ ಸರ್ಕಾರಿ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

    ವಸತಿ ನಿಲಯದಲ್ಲಿ 25ವಿದ್ಯಾರ್ಥಿಗಳಿಗೆ ಮಂಚ, ಹಾಸಿಗೆ, ರಗ್ಗುಗಳಿಲ್ಲ. ಮಧ್ಯಾಹ್ನದ ಬಿಸಿಯೂಟವನ್ನು ಬೆಳಗ್ಗೆಯೇ ತಯಾರಿಸಿರುವುದರಿಂದ ಆಹಾರ ಪದಾರ್ಥ ಬಿಸಿ ಇರುವುದಿಲ್ಲ. ಸೊಳ್ಳೆ ಪರದೆ ನೀಡಬೇಕು. ಮೇಲ್ಗಡೆಯ ರೂಮ್‌ಗಳಿಗೆ ಇನ್‌ವರ್ಟರ್ ವ್ಯವಸ್ಥೆಯಿಲ್ಲ. ಗ್ರಂಥಾಲಯದಲ್ಲಿ ಪಿಯುಸಿ, ಬಿಎ, ಬಿಕಾಂ, ಡಿಪ್ಲೊಮಾ ಮೆಕಾನಿಕಲ್, ಸಿವಿಲ್ ಪಠ್ಯ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಪುಸ್ತಕಗಳು, ಬಿಸಿ ನೀರಿನ ವ್ಯವಸ್ಥೆ, ಹಾಸ್ಟೆಲ್ ಹೊರಗಡೆ ಸ್ವಚ್ಛತೆ, ಚರಂಡಿ ನೀರು ಹರಿಯದೆ ವಾಸನೆ, ವಸತಿ ಮತ್ತು ಅಧ್ಯಯನಕ್ಕೆ ಪೂರಕ ವಾತಾವರಣ ಇಲ್ಲ ಎಂದು ಶಾಸಕರ ಎದುರು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಿಚ್ಚಿಟ್ಟರು.

    ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯಿಸಿ ಮಾತನಾಡಿ, ಅಗತ್ಯ ಪುಸ್ತಕಗಳು, ಕ್ರಿಕೆಟ್ ಮತ್ತು ವಾಲಿಬಾಲ್ ಕ್ರೀಡೋಪಕರಣಗಳನ್ನು ಸ್ವಂತ ಹಣದಲ್ಲಿ ಕೊಡಿಸುವುದಾಗಿ ಹೇಳಿದರು. ಹಾಸ್ಟೆಲ್ ಪರಿಸರ ಸ್ವಚ್ಛವಾಗಿಡಲು ಪುರಸಭೆ ಅಧಿಕಾರಿಗಳಿಗೆ ಸೂಚಿಸುವುದಾಗಿ, ಗುಣಮಟ್ಟದ ಆಹಾರ, ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

    ಹಾಸ್ಟೆಲ್ ವಾರ್ಡ್‌ನ್ ತರಬೇತಿಗೆ ಹೋಗಿದ್ದರಿಂದ ಗೈರಾಗಿದ್ದರು. ವಿದ್ಯಾರ್ಥಿಗಳಿಗೆ ಬ್ರೆಡ್, ಬಾಳೆಹಣ್ಣು ವಿತರಿಸಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಆರ್.ಪಿ.ಶಶಿಕುಮಾರ್ ಪ್ರಮುಖರಾದ ಎಲ್.ರಾಜೇಶ್. ನೇಣ್ಕಿ ಗಿರೀಶ್ ಸೇರಿ ಇತರರಿದ್ದರು.

    ವಿದ್ಯಾರ್ಥಿಗಳಿಗೆ ಗುಣಮಟ್ಟದ ಬಿಸಿ ಆಹಾರ, ಸುಸಜ್ಜಿತ ಗ್ರಂಥಾಲಯ, ಕ್ರೀಡೋಪಕರಣ, ಆಸನ ಸೇರಿ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತೇನೆ. ವಸತಿ ನಿಲಯದ ಹೊರ ಮತ್ತು ಒಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ.
    | ಗುರುರಾಜ, ಹಾಸ್ಟೆಲ್ ವಾರ್ಡನ್, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts