More

    ದೇವರ ಧ್ಯಾನದಿಂದ ಸಾರ್ಥಕ ಜೀವನ ಸಾಗಿಸಿ


    ಕಂಪ್ಲಿ: ಗುರು ಕಾರುಣ್ಯ ಗಳಿಸಲು ಗುರುವಿನ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

    ನಂ.3 ಸಣಾಪುರದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ಮೌನತಪಸ್ವಿ ಚಿಕ್ಕೇನಕೊಪ್ಪ ಚನ್ನವೀರ ಶರಣರ 29ನೇ ಪುಣ್ಯಸ್ಮರಣೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹದ ಸಾನ್ನಿಧ್ಯವಹಿಸಿ ಮಾತನಾಡಿದರು. ಗುರು ಬೋಧಿಸಿದ ಆಚಾರ- ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧರ್ಮ-ರಾಜಕೀಯ ವಾತಾವರಣ ಕಲುಷಿತ ಗೊಂಡಿದೆ. ದೇವರ ಧ್ಯಾನದಿಂದ ಅರಿವು ಗಳಿಸಿ ಕೊಂಡು ಸಾರ್ಥಕ ಜೀವನ ಸಾಗಿಸಬೇಕು ಎಂದರು.

    ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಮಹಿಳೆ ಯರು ಧಾರಾವಾಹಿ, ವ್ಯಾಟ್ಸಾೃಪ್, ಫೇಸ್‌ಬುಕ್ ಮಾಯೆಯಿಂದ ಹೊರಬಂದು ಮಕ್ಕಳನ್ನು ಶಿಕ್ಷಣ ವಂತರನ್ನಾಗಿಸಬೇಕಿದೆ. ತಂದೆ- ತಾಯಿ, ಅತ್ತೆ-ಮಾವನನ್ನು ಪ್ರೀತಿ ಮತ್ತು ಅಂತಃಕರಣದಿಂದ ಪೋಷಿಸುವಲ್ಲಿ ಮಗ-ಸೊಸೆ ಮುಂದಾಗಬೇಕು. ಮಕ್ಕಳಿಗೆ ತಾರತಮ್ಯವಿಲ್ಲದ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಜಾಗೃತಿ ತೋರಬೇಕು ಎಂದರು.

    ಐದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಪ್ರಮುಖರಾದ ಮುಷ್ಟೂರು ಈಶಣ್ಣ ತಾತ, ಸಿದ್ದಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಜಿ.ಈಶಪ್ಪ, ಕೆ.ಮರಿಶಾಂತ, ಕೆ.ದೊಡ್ಡಬಸವ, ಟಿ.ವೀರನಗೌಡ, ಎಂ.ಚನ್ನಪ್ಪ, ಉಳ್ಳಾಗಡ್ಡಿ ಮಲ್ಲಯ್ಯ, ಜಿ.ಕುಮಾರಸ್ವಾಮಿ, ಕೆ.ಶ್ರೀನಿವಾಸ ರಾವ್, ಎಂ.ಸುಧೀರ್, ಕರಿಬಸವನಗೌಡ, ಕೇಶವರೆಡ್ಡಿ, ಕೆ.ವೆಂಕಟರಾಮರಾಜು, ವೈ.ರಮಣಯ್ಯ, ಬಾಲಕೃಷ್ಣ ಇತರರಿದ್ದರು.

    ಕಂಪ್ಲಿ ಸಮೀಪದ ಸಣಾಪುರದಲ್ಲಿ ಚಿಕ್ಕೇನಕೊಪ್ಪ ಚನ್ನವೀರ ಶರಣರ ಪುಣ್ಯಸ್ಮರಣೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಜರುಗಿತು. ನಾಗಭೂಷಣ ಶಿವಾಚಾರ್ಯರು, ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ, ಪಿ.ಮೂಕಯ್ಯಸ್ವಾಮಿ, ಜಿ.ಈಶಪ್ಪ, ಕೆ.ಮರಿಶಾಂತ, ವೈ.ರಮಣಯ್ಯ, ಕೆ.ವೆಂಕಟರಾಮರಾಜು ಇತರರಿದ್ದರು.


    ಬಳ್ಳಾರಿಯ ಬಿಡಿಎಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಪಾಲಿಕೆ ಮೇಯರ್ ಬಿ.ಶ್ವೇತಾ ಉದ್ಘಾಟಿಸಿದರು. ಉಪ ಮೇಯರ್ ಬಿ.ಜಾನಕಿ, ಮಾಜಿ ಮೇಯರ್ ಎಂ.ರಾಜೇಶ್ವರಿ, ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಸಣ್ಣಗೊಂಡ್ಲ ರಾಕೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts