More

    ಬುರ್ರಕಥಾ ಈರಮ್ಮ ಹೆಸರಿನಲ್ಲಿ ದತ್ತಿನಿಧಿ

    ಕಂಪ್ಲಿ: ಸಮೀಪದ ಹಳೆದರೋಜಿಯ ನಾಡೋಜ ಜಾನಪದಶ್ರೀ ಬುರ್ರಕಥಾ ಈರಮ್ಮ ಅವರ ಹೆಸರಿನಲ್ಲಿ, ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ ತಮ್ಮಪಾಲಕರಾಗಿದ್ದ ಜಿ.ನಾರಾಯಣರಾವ್ ಸ್ಮರಣಾರ್ಥ ದತ್ತಿನಿಧಿ ಸ್ಥಾಪಿಸಿದ್ದಾರೆ. ದತ್ತಿನಿಧಿ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಒಪ್ಪಿಸಿದ್ದಾರೆ.

    ದತ್ತಿನಿಧಿಯಿಂದ ಪ್ರತಿವರ್ಷ ಬುರ್ರಕಥಾ ಈರಮ್ಮನವರ ವಿಚಾರ ಸಂಕಿರಣ, ಪ್ರಶಸ್ತಿ ಪುರಸ್ಕಾರ ನೀಡಿಕೆ, ತಳ ಸಮುದಾಯದವರಿಗೆ ಪ್ರೋತ್ಸಾಹಧನ ನೀಡುವುದು ಸೇರಿ ದರೋಜಿ ಈರಮ್ಮರ ಹೆಸರಿನಲ್ಲಿ ನಾನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಬುರ್ರಕಥಾ ಈರಮ್ಮನವರ ಹೆಸರನ್ನು ಚಿರಸ್ಥಾಯಿಗೊಳಿಸಿ, ಯುವಪೀಳಿಗೆಯಲ್ಲಿ ಜಾಗೃತಿಗೊಳಿಸುವ ಮೇತ್ರಿಯವರ ಆಶಯ ಆದರ್ಶವಾಗಿದೆ ಎಂದು ಹಳೆದರೋಜಿಯ ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಷನ್ ಅಧ್ಯಕ್ಷ ಡಾ.ವಿ.ರಾಮಾಂಜನೇಯ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts