More

    ರೈತರು ಸಾವಯವ ಕೃಷಿಗೆ ಆದ್ಯತೆ ನೀಡಲಿ

    ಕಂಪ್ಲಿ: ರೈತರು ಸಾವಯವ ತೋಟಗಾರಿಕೆ ಬೆಳೆಯತ್ತ ಗಮನ ಹರಿಸಬೇಕು ಎಂದು ಮುನಿರಾಬಾದ್ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಪಿ.ಎಂ.ಗಂಗಾಧರಪ್ಪ ಹೇಳಿದರು.

    ಇಲ್ಲಿನ ಕೆ.ಎಸ್.ಭವನದಲ್ಲಿ ಹಮ್ಮಿಕೊಂಡಿದ್ದ ಮುನಿರಾಬಾದ್ ತೋಟಗಾರಿಕಾ ಮಹಾವಿದ್ಯಾಲಯದ ಬಿಎಸ್ಸಿ ತೋಟಗಾರಿಕೆ ವಿದ್ಯಾರ್ಥಿಗಳ ತೋಟಗಾರಿಕಾ ವಸ್ತು ಪ್ರದರ್ಶನ ಮತ್ತು ಮಾಹಿತಿ ಸಮಾರಂಭದ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು. ತೋಟಗಾರಿಕೆ ಬೆಳೆ ಬೆಳೆದು ಮಣ್ಣು, ನೀರು, ಪರಿಸರ ಸಂರಕ್ಷಣೆಯತ್ತ ಕಾಳಜಿವಹಿಸಬೇಕು. ರೈತರ ಮಕ್ಕಳು ತೋಟಗಾರಿಕೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸ್ವ ಉದ್ಯೋಗ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಸಿವಿಲ್ ಹುದ್ದೆಗೇರಬೇಕು. ಮಾನವೀಯಮೌಲ್ಯ, ಕ್ರಿಯಾಶೀಲತೆ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

    ಸಮಾರಂಭ ಉದ್ಘಾಟಿಸಿದ ಬಳ್ಳಾರಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಕೆ.ಮಲ್ಲಿಕಾರ್ಜುನ ಮಾತನಾಡಿ, ಜನಸಂಖ್ಯೆ ಏರಿಕೆಗೆ ತಕ್ಕಂತೆ ಆರೋಗ್ಯಕರ ಆಹಾರ ಒದಗಿಸುವಲ್ಲಿ ರೈತನ ಜವಾಬ್ದಾರಿಯಿದೆ. ಯಂತ್ರೋಪಕರಣ ಬಳಕೆ ನೆಪದಲ್ಲಿ ಜಾನುವಾರು ಸಾಕಣೆಯಿಂದ ವಿಮುಖರಾಗುತ್ತಿರುವುದು ಸರಿಯಲ್ಲ. ಸಾವಯವ ಕೃಷಿಯಿಂದ ಮಾತ್ರ ಆರೋಗ್ಯಕರ ಆಹಾರ ಉತ್ಪಾದನೆ ಸಾಧ್ಯ ಎಂದರು.

    ಹೊಸಪೇಟೆ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ.ಶಂಕರ್ ಮಾತನಾಡಿ, ಕೃಷಿಕರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳುವ ಮೂಲಕ ತೋಟಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದರು.

    ಕಂಪ್ಲಿಯ ಡಿಎಟಿಸಿ ಸಹಾಯಕ ಕೃಷಿ ನಿರ್ದೇಶಕಿಯರಾದ ಡಾ.ಸಿ.ಆರ್.ಅಭಿಲಾಷಾ, ವಿದ್ಯಾವತಿ ಎಸ್.ಹೊಸಮನಿ, ಕೃಷಿ ಅಧಿಕಾರಿ ಶ್ರೀಧರ್, ಆರ್‌ಎಚ್‌ಡಬ್ಲುೃಇ ಸಂಯೋಜಕ ಡಾ.ಮೌಲಾಸಾಬ್, ವಿದ್ಯಾರ್ಥಿಗಳಾದ ಎ.ಪಿ.ಸಹನಾ, ತಿಪ್ಪೇಸ್ವಾಮಿ, ಸಿ.ಆರ್. ತೇಜಾ ಇತರರಿದ್ದರು. ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ತೋಟಗಾರಿಕಾ ವಸ್ತು ಪ್ರದರ್ಶನದೊಂದಿಗೆ ಮಾಹಿತಿ ನೀಡಿದರು. ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಶಿಬಿರದ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕಂಪ್ಲಿ ತಾಲೂಕಿನ ಪ್ರಗತಿಪರರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts