More

    ಸದೃಢ ರಸ್ತೆ ನಿರ್ಮಿಸಲು ಶ್ರಮಿಸಿ

    ಕಂಪ್ಲಿ: ಸದೃಢ ರಸ್ತೆ ನಿರ್ಮಿಸಲು ಶಾಸಕ ಜೆ.ಎನ್.ಗಣೇಶ್ ಶ್ರಮಿಸಬೇಕು ಎಂದು ಹಂಪಿ ಸಾವಿರದೇವರಮಠದ ವಾಮದೇವ ಶಿವಾಚಾರ್ಯರು ಸಲಹೆ ನೀಡಿದರು.
    ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ 2021-22ನೇಸಾಲಿನ ಕೆಕೆಆರ್‌ಡಿಬಿ ಯೋಜನಡಿ 6ಕೋಟಿ ರೂ. ವೆಚ್ಚದಲ್ಲಿ ಕಂಪ್ಲಿ-ಎಮ್ಮಿಗನೂರು ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರಕ್ಕಾಗಿ ಜೀವನವಲ್ಲ, ಅಭಿವೃದ್ಧಿಗಾಗಿ ಜೀವನವಾಗಿದ್ದು, ಶಾಸಕ ಗಣೇಶ್ ಶಕ್ತಿ ಮೀರಿ ಕೆಲಸ ಮಾಡಿ, ಜನರ ಪ್ರೀತಿ ವಿಶ್ವಾಸ ಗಳಿಸಬೇಕು ಎಂದರು.
    ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ-ಎಮ್ಮಿಗನೂರು ರಸ್ತೆ ಅಭಿವೃದ್ಧಿ ನನ್ನ ಕನಸಾಗಿದ್ದು, 16ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು. ಮೊದಲ ಹಂತದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಎಮ್ಮಿಗನೂರಿನಿಂದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಅನುದಾನ ತಂದು ರಸ್ತೆ ಸೇರಿ ಮೂಲಸೌಕರ್ಯ ಒದಗಿಸಲಾಗುತ್ತಿದ್ದು ನನ್ನ ಮನಸ್ಸಿಗೆ ತೃಪ್ತಿ ತಂದಿದೆ ಎಂದರು.
    ಮುಖಂಡರಾದ ಬಿ.ಸದಾಶಿವಪ್ಪ, ವಡ್ಡರ ವೀರೇಶ್, ರಾಮಾಂಜಿನಿ, ಸೂಗಪ್ಪ, ವೆಂಕಟರಾಮರಾಜು, ನಾಗರೆಡ್ಡಿ, ಗುತ್ತಿಗೆದಾರ ಪ್ರವೀಣ್, ಪಿಡಿಒ ತಾರುಲಕ್ಷ್ಮಣ ನಾಯ್ಕ, ಗ್ರಾಪಂ ಸದಸ್ಯರು, ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts