More

    ಮೆಟ್ರಿಯ ಪ್ರಣವಜ್ಯೋತಿ ಮಹಾರಥೋತ್ಸವ ಅದ್ದೂರಿ

    ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾರಥೋತ್ಸವ ಸೋಮವಾರ ಸಂಜೆ ಶ್ರದ್ಧೆ, ಭಕ್ತಿಯಿಂದ ಜರುಗಿತು.

    ಶ್ರೀವಿಶ್ವಾರಾಧ್ಯ ಗುರುಕುಲ ಮಠದಿಂದ ಮಹಾರಥೋತ್ಸವ ಆರಂಭಗೊಂಡಿತು. ರಥದ ಕಳಸಕ್ಕೆ ಸದ್ಭಕ್ತರು ಹೂವು, ಹಣ್ಣು, ಉತ್ತತ್ತಿ ಸಮರ್ಪಿಸಿದರು. ಶ್ರಾವಣಮಾಸ ನಿಮಿತ್ತ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀಯಡಿಯೂರು ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಮಹಾಮಂಗಲಗೊಂಡಿತು. ಸಾನ್ನಿಧ್ಯ ವಹಿಸಿದ್ದ ತೆಕ್ಕಲಕೋಟೆ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.

    ಇದಕ್ಕೂ ಮುನ್ನ ಮಠದಲ್ಲಿ ಪ್ರತಿಷ್ಠಾಪಿಸಿರುವ ಪಂಚಪೀಠಾಧೀಶ್ವರ ಶಿಲಾಮೂರ್ತಿ, ಉಜ್ಜಿನಿ ಸಿದ್ದಲಿಂಗೇಶ್ವರ, ಎಮ್ಮಿಗನೂರು ಜಡೆಸಿದ್ದೇಶ್ವರ, ನವಗ್ರಹ, ಗಣೇಶ, ಶ್ರೀಮಠ ಸಂಸ್ಥಾಪಕರಾದ ವೇದಮೂರ್ತಿ ಮಹಾದೇವತಾತ, ಗೌರಮ್ಮ ಅವ್ವನವರ ಶಿಲಾಮೂರ್ತಿಗಳಿಗೆ ವಿಶೇಷ ರುದ್ರಾಭಿಷೇಕ, ಗಂಗೆಸ್ಥಳ ಮಹೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗದವು.

    ಸೆ.1ರಿಂದ 4ರವರೆಗೆ ಕ್ರಮವಾಗಿ ಪಂಚಪೀಠಾಧೀಶ್ವರರ ಉತ್ಸವ ಮೂರ್ತಿ ಅಡ್ಡಪಲ್ಲಕ್ಕಿ, ಪ್ರಣವೋತ್ಸವ, ಗೋವೋತ್ಸವ, ಭಸ್ಮೋತ್ಸವ, ಗೀತೋತ್ಸವ ಕಾರ್ಯಕ್ರಮ ವಿಶೇಷವಾಗಿ ಜರುಗಿದವು.

    160 ಯೂನಿಟ್ ರಕ್ತ ಸಂಗ್ರಹ: ಪ್ರಣವಜ್ಯೋತಿ ಮಹಾರಥೋತ್ಸವ, ಗೌರಸಮುದ್ರ ಮಾರೆಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ದೇವಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ವಾಮಿ ವಿವೇಕಾನಂದ ರಕ್ತ ಭಂಡಾರ, ವೀರಶೈವ ಲಿಂಗಾಯತ ಯುವ ಸೇವಾ ಸಂಘ, ಗ್ರಾಪಂ ಆಡಳಿತ, ಗ್ರಾಮಸ್ಥರ ಆಶ್ರಯದಲ್ಲಿ ಭಾನುವಾರ ಮತ್ತು ಸೋಮವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 160 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts