More

    ಡಿಜಿಟಲ್ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

    ಕಂಪ್ಲಿ: ಸ್ವಸಹಾಯ ಸಂಘಗಳ ಸದಸ್ಯೆಯರು ಪ್ರಸ್ತುತ ತಂತ್ರಜ್ಞಾನ ಬಳಸಿಕೊಂಡು ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ಹೇಳಿದರು.

    ರಾಮಸಾಗರ ಗ್ರಾಪಂ ಆವರಣದಲ್ಲಿ ಬುಧವಾರ ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಯೋಜನೆಯಡಿ ಗ್ರಾಮೀಣ ಸಕ್ಷಮ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಸ್ವಸಹಾಯ ಸಂಘಗಳು ಡಿಜಿಟಲ್ ಸೌಲಭ್ಯ ಬಳಸಿಕೊಳ್ಳಬೇಕಿದೆ. ರಾಮಸಾಗರ ಗ್ರಾಪಂ ವ್ಯಾಪ್ತಿಯಲ್ಲಿ 76 ಸ್ವಸಹಾಯ ಗುಂಪುಗಳಿದ್ದು, ಪ್ರಾಯೋಗಿಕವಾಗಿ ಮೊದಲ ಸಕ್ಷಮ ಕೇಂದ್ರ ಆರಂಭಿಸಿದೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ಆಧುನಿಕ ತಂತ್ರಜ್ಞಾನದ ತರಬೇತಿ ನೀಡಲಾಗುವುದು. ಮಹಿಳೆಯರು ಕೀಳರಿಮೆ ತೊರೆದು ಎಲ್ಲ ರಂಗಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

    ಗ್ರಾಪಂ ಅಧ್ಯಕ್ಷೆ ಎಂ.ಆಶಾ, ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ಪಿಡಿಒ ಕೆ.ಹನುಮಂತಪ್ಪ, ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆರ್.ಶಾಂತಲಾ, ಜಿಲ್ಲಾ ವ್ಯವಸ್ಥಾಪಕ ವಿಜಯಕುಮಾರ್, ರಘುವರ್ಮ, ಸಹಾಯಕ ನಿರ್ದೇಶಕಿ ಅಪರಂಜಿ, ವಿಷಯ ನಿರ್ವಾಹಕಿ ಜಿ.ಮಂಜುಳಾ, ವಲಯ ಮೇಲ್ವಿಚಾರಕಿ ಕಾವ್ಯಾ, ಬಿಆರ್‌ಪಿಪಿ ಆಶ್ವಿನಿ, ಡಿಇಒ ಜಯಶ್ರೀ, ಎಂಬಿಕೆ ಟಿ.ವಿದ್ಯಾ, ಎಲ್‌ಸಿಆರ್‌ಪಿಗಳಾದ ರೂಪಾ, ಸುಶೀಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts