More

    ಸತ್ತ ಕೋತಿಗಳಿಗೆ ಮುಕ್ತಿ ನೀಡುವ ರಿಕ್ಷಾವಾಲಾ; ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ಮಾಡುವ ಚಂದ್ರಶೇಖರ್

    ಕಂಪ್ಲಿ: ಪಟ್ಟಣದಲ್ಲಿ ಎಲ್ಲಿಯೇ ಕೋತಿ ಸತ್ತರೆ ಜನರ ನೆನಪಿಗೆ ಬರುವುದೇ ರಿಕ್ಷಾವಾಲಾ ಎನ್.ಚಂದ್ರಶೇಖರ್ ಹೆಸರು. ತಕ್ಷಣ ಅಲ್ಲಿಗೆ ತೆರಳಿ ಕಳೇಬರ ತೆಗೆದುಕೊಂಡು ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸುವುದು ಈತನ ಪ್ರವೃತ್ತಿ.

    ಕಳೆದ 25 ವರ್ಷಗಳಿಂದ ಬಾಡಿಗೆಗೆ ರಿಕ್ಷಾ ತುಳಿದು ಜೀವನ ಸಾಗಿಸುತ್ತಿರುವ ಚಂದ್ರಶೇಖರ್, ಹತ್ತು ವರ್ಷಗಳಿಂದ ಕೋತಿಗಳ ಅಂತ್ಯಸಂಸ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 50 ಮಂಗಳ ಅಂತ್ಯಕ್ರಿಯೆ ನಡೆಸಿದ್ದು, ಪಟ್ಟಣದಲ್ಲಿ ಹೆಸರುವಾಸಿಯಾಗಿದ್ದಾರೆ. ಯಾರಾದರೂ ಈತನ ಮೊಬೈಲ್ (9739036458)ಗೆ ಕರೆ ಮಾಡಿದರೆ ಇಲ್ಲವೇ ಕೋತಿಗಳು ಸತ್ತಿರುವ ಕುರಿತು ಗೊತ್ತಾದರೆ ತಕ್ಷಣ ಅಲ್ಲಿ ಪ್ರತ್ಯಕ್ಷರಾಗುತ್ತಾರೆ. ತನ್ನ ರಿಕ್ಷಾದಲ್ಲಿಯೇ ಅಂತ್ಯಸಂಸ್ಕಾರದ ಮೆರವಣಿಗೆ ಸಿದ್ಧಪಡಿಸುತ್ತಾರೆ. ಪಟ್ಟಣದಲ್ಲಿ ಒಂದು ಸುತ್ತು ಹಾಕಿ ಆಯಕಟ್ಟಿನ ಸ್ಥಳಗಳಲ್ಲಿ ಅಂತಿಮ ದರ್ಶನಕ್ಕಿಡುತ್ತಾರೆ. ಸತ್ತ ಕೋತಿ ಮುಂದೆ ಜನರು ಹಾಕುವ ಹಣದಲ್ಲಿ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಚಂದ್ರಶೇಖರ್ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಸತ್ತ ಕೋತಿಗಳ ಅಂತ್ಯಸಂಸ್ಕಾರ ಮಾಡುವುದು ಪುಣ್ಯವೆಂದು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಜನರು ನೀಡುವ ದಕ್ಷಿಣೆಯಲ್ಲಿ ಕೋತಿಯ ಅಂತ್ಯಸಂಸ್ಕಾರ ಮಾಡುತ್ತೇನೆ. ಅದರಲ್ಲಿ ಸ್ವಲ್ಪ ಉಳಿದರೆ ಸ್ವಂತಕ್ಕೆ ಬಳಸಿಕೊಳ್ಳುತ್ತೇನೆ.
    | ಎನ್.ಚಂದ್ರಶೇಖರ್ ಕೋತಿ ಅಂತ್ಯಸಂಸ್ಕಾರ ಸೇವಾಕರ್ತ

    ಕಂಪ್ಲಿ ಪಟ್ಟಣದಲ್ಲಿ ಕೋತಿ ಸತ್ತರೆ ಸಾಕು ಚಂದ್ರಶೇಖರ್ ಅಂತ್ಯಸಂಸ್ಕಾರಕ್ಕೆ ಮುಂದಾಗುತ್ತಾರೆ. ಇದರಿಂದ ಮಂಗಗಳ ಶವ ಕಸದ ತೊಟ್ಟಿಗಳಿಗೆ ಸೇರುವುದು ತಪ್ಪಿದೆ.
    | ಜಯಪ್ರಕಾಶ್ ಚೌದ್ರಿ ಪ್ರಾಣಿ ದಯಾ ಸಂಘದ ಸದಸ್ಯ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts