More

    ಲಿಫ್ಟಿಕ್ ಮೆಣಸಿನಕಾಯಿ ಬೆಳೆದು ಕೈಸುಟ್ಟುಕೊಂಡ ಬೆಳೆಗಾರರು..!

    ಕಂಪ್ಲಿ: ಖಾಸಗಿ ಕಂಪನಿ ವಿತರಿಸಿದ ಲಿಫ್ಟಿಕ್ ಮೆಣಸಿನಕಾಯಿ ನಾಟಿ ಮಾಡಿದ ಹೊಸದರೋಜಿ ರೈತರು ಸಾವಿರಾರು ರೂ.ನಷ್ಟ ಅನುಭವಿಸಿದ್ದು, ಕುಡತಿನಿ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏಳುಬೆಂಚಿಯ ಗ್ರಾಮದ ಖಾಸಗಿ ಕಂಪನಿ ಪ್ರತಿನಿಧಿಯೊಬ್ಬರು ಎರಡು ಸಾವಿರ ರೂ. ಪಡೆದು, ಎಕರೆಗೆ 14 ಸಾವಿರ ಲಿಫ್ಟಿಕ್ ತಳಿಯ ಮೆಣಸಿಕಾಯಿ ಸಸಿ ವಿತರಿಸಿದ್ದರು.

    ಇಳುವರಿ ಬಂದ ನಂತರ 20 ಸಾವಿರ ರೂ.ಗೆ ಕ್ವಿಂಟಾಲ್‌ನಂತೆ ಖರೀದಿಸುವುದಾಗಿ ತಿಳಿಸಿದ್ದರು. ಸುಮಾರು 40 ರೈತರು 60 ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಆದರೆ, ಸಸಿಗಳ ಬೆಳವಣಿಗೆ ಕುಂಠಿತವಾಗಿ, ಸಂಪೂರ್ಣ ನಾಶವಾಗಿದೆ. ಎಕರೆಗೆ 60 ಸಾವಿರ ರೂ. ವ್ಯಯಿಸಲಾಗಿದೆ. ಈಗ ಮಾಡಿದ ಸಾಲ ಮರುಪಾವತಿಸಲು ತೀವ್ರ ತೊಂದರೆಯಾಗಿದೆ. ಕಂಪನಿಯವರು ನಷ್ಟ ಪರಿಹಾರ ಕೊಡಬೇಕು. ತಪ್ಪಿದಲ್ಲಿ ಹೋರಾಟ ನಡೆಸುತ್ತೇವೆ ಎಂದು ದೂರಿನಲ್ಲಿ ತಿಳಿಸಿದ್ದೇವೆ ಎಂದು ರೈತರಾದ ಎಚ್.ದಾನಪ್ಪ, ಎಂ.ಯು.ನಾಗರಾಜ, ಯು.ತಿಮ್ಮಪ್ಪ, ಯು.ಹಳ್ಳಪ್ಪ, ವಿ.ನಾರಾಯಣ, ವಿ.ಹನುಮಂತಪ್ಪ, ಯು.ತಿಮ್ಮಪ್ಪ, ಯು.ವೀರೇಶ್, ಈರಣ್ಣ, ಯರೆಪ್ಪ, ದ್ಯಾವಣ್ಣ ಇತರರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts